‘3 ಈಡಿಯಟ್ಸ್’ ಖ್ಯಾತಿಯ ಖ್ಯಾತ ಬಾಲಿವುಡ್ ನಟ ಸಾವು

ಗುರುವಾರ, 21 ಸೆಪ್ಟಂಬರ್ 2023 (16:27 IST)
ಮುಂಬೈ: 3 ಈಡಿಯೆಟ್ಸ್ ಸಿನಿಮಾ ಖ್ಯಾತಿಯ ಬಾಲಿವುಡ್ ನ ಖ್ಯಾತ ಪೋಷಕ ನಟ ಅಮಿತ್ ಮಿಶ್ರ ಮನೆಯಲ್ಲಿ ಸಂಭವಿಸಿದ ಅವಘಡದಲ್ಲಿ ಮೃತಪಟ್ಟಿದ್ದಾರೆ.

ಅವರಿಗೆ 58 ವರ್ಷ ವಯಸ್ಸಾಗಿತ್ತು. ತಮ್ಮ ಅಡುಗೆ ಮನೆಯಲ್ಲಿ ಸ್ಟೂಲ್ ಹತ್ತಿ ವಸ್ತುವೊಂದನ್ನು ತೆಗೆಯಲು ಹೊರಟಿದ್ದಾಗ ಆಯತಪ್ಪಿ ಬಿದ್ದಿದ್ದರು. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಸಾವನ್ನಪ್ಪಿದ್ದಾರೆ.

ಅವಘಡದ ವೇಳೆ ಮನೆಯಲ್ಲಿ ಪತ್ನಿ ಸಹಿತ ಯಾರೂ ಮನೆಯಲ್ಲಿ ಇರಲಿಲ್ಲ. ನೆರೆಹೊರೆಯವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ನಟನನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. 3 ಈಡಿಯೆಟ್ಸ್, ದಿಲ್ ಚಾಹ್ತಾ ಹೈ ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಪೋಷಕ ನಟನಾಗಿ ಹೆಸರು ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ