ಮಲಯಾಳಂ ನಿರ್ಮಾಪಕನ ಜೊತೆ ನಟಿ ತ್ರಿಶಾ ಕೃಷ್ಣನ್ ವಿವಾಹ?

ಬುಧವಾರ, 20 ಸೆಪ್ಟಂಬರ್ 2023 (17:34 IST)
ಚೆನ್ನೈ: ಬಹುಬಾಷಾ ನಟಿ ತ್ರಿಶಾ ಕೃಷ್ಣನ್ ಸದ್ಯದಲ್ಲೇ ಮಲಯಾಳಂ ಸಿನಿಮಾ ನಿರ್ಮಾಪಕರೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ತ್ರಿಶಾ ಈ ಮೊದಲು ಉದ್ಯಮಿ ವರುಣ್ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡು ಬಳಿಕ ಬ್ರೇಕಪ್ ಮಾಡಿಕೊಂಡಿದ್ದರು. ಈಗ ತ್ರಿಶಾಗೆ 40 ವರ್ಷ. ಇದುವರೆಗೆ ಮದುವೆ ಬಗ್ಗೆ ಮನಸ್ಸು ಮಾಡಿರಲಿಲ್ಲ.

ಆದರೆ ಈಗ ಮಲಯಾಳಂನ ಖ್ಯಾತ ನಿರ್ಮಾಪಕರೊಬ್ಬರ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ