ರಶ್ಮಿಕಾ ಮಂದಣ್ಣ ಜೊತೆ ಈಗಲೂ ಸಂಪರ್ಕದಲ್ಲಿದ್ದೀರಾ ಎಂಬ ಪ್ರಶ್ನೆಗೆ ರಕ್ಷಿತ್ ಶೆಟ್ಟಿ ಉತ್ತರ ನೋಡಿ!

ಶುಕ್ರವಾರ, 22 ಸೆಪ್ಟಂಬರ್ 2023 (08:40 IST)
File photo
ಹೈದರಾಬಾದ್: ಸಪ್ತಸಾಗರದಾಚೆ ಎಲ್ಲೊ ಸಿನಿಮಾವನ್ನು ತೆಲುಗಿನಲ್ಲಿ ಬಿಡುಗಡೆ ಸಂದರ್ಭದಲ್ಲಿ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿಗೆ ಮಾಜಿ ಪ್ರೇಮಿ ರಶ್ಮಿಕಾ ಮಂದಣ್ಣ ಬಗ್ಗೆ ಪ್ರಶ್ನೆ ಎದುರಾಗಿದೆ.

ತೆಲುಗು ಯೂ ಟ್ಯೂಬ್ ವಾಹಿನಿಯೊಂದಕ್ಕೆ ರಕ್ಷಿತ್ ಸಂದರ್ಶನ ನೀಡಿದ್ದು, ಈ ವೇಳೆ ಸಂದರ್ಶಕರು ರಶ್ಮಿಕಾ ಜೊತೆ ಈಗಲೂ ಸಂಪರ್ಕದಲ್ಲಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ರಕ್ಷಿತ್ ‘ಹೌದು. ನಾವು ಸಂಪಕರ್ದಲ್ಲಿದ್ದೇವೆ. ಆಕೆಗೆ ದೊಡ್ಡ ಕನಸುಗಳಿದ್ದವು. ಅದನ್ನು ಇಂದು ನನಸು ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಆಕೆಯನ್ನು ಮೆಚ್ಚಲೇಬೇಕು’ ಎಂದಿದ್ದಾರೆ. ತೆಲುಗಿನಲ್ಲಿ ಸಪ್ತಸಾಗರದಲು ದಾಟಿ ಎಂಬ ಟೈಟಲ್ ನಲ್ಲಿ ಇಂದಿನಿಂದ ಥಿಯೇಟರ್ ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ