ಸೈಮಾ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ಗೆ ಎದುರಾಯ್ತು ಒತ್ತಡ

ಶನಿವಾರ, 16 ಸೆಪ್ಟಂಬರ್ 2023 (09:47 IST)
ಬೆಂಗಳೂರು: ದುಬೈನಲ್ಲಿ ನಡೆದ 2023 ನೇ ಸಾಲಿನ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಕೆಜಿಎಫ್ 2 ಚಿತ್ರದ ನಟನೆಗಾಗಿ ರಾಕಿಂಗ್ ಸ್ಟಾರ್ ಯಶ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇದರ ಬೆನ್ನಲ್ಲೇ ನೆಟ್ಟಿಗರು ಯಶ್ ಗೆ ಇನ್ನಾದರೂ ಮುಂದಿನ ಸಿನಿಮಾ ಘೋಷಣೆ ಮಾಡಿ ಎಂದು ಒತ್ತಾಯ ಮಾಡಿದ್ದಾರೆ. ಯಶ್ ಸಿನಿಮಾ ಬಗ್ಗೆ ಈಗಾಗಲೇ ಕೆಲವು ಮಾಹಿತಿಗಳು ಹೊರಬಿದ್ದಿವೆ. ಆದರೆ ಯಾವುದೂ ಅಧಿಕೃತವಾಗಿಲ್ಲ.

ಗಣೇಶ ಹಬ್ಬಕ್ಕೆ ಯಶ್ 19 ಬಗ್ಗೆ ಅಪ್ ಡೇಟ್ ಸಿಗಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಗಣೇಶ ಹಬ್ಬಕ್ಕೆ ಎರಡೇ ದಿನ ಬಾಕಿಯಿದ್ದು, ಇದುವರೆಗೆ ಯಶ್ ಕಡೆಯಿಂದ ಯಾವುದೇ ಸುದ್ದಿಯಿಲ್ಲ. ಹೀಗಾಗಿ ಅಭಿಮಾನಿಗಳು ತುಂಬಾ ದಿನ ಗ್ಯಾಪ್ ಆಯ್ತು. ಇನ್ನಾದರೂ ಸಣ್ಣ ಅಪ್ ಡೇಟ್ ಆದರೂ ಕೊಡಿ ಎಂದು ಒತ್ತಡ ಹೇರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ