ಬರ್ತ್ ಡೇಗೆ ಅಭಿಮಾನಿಗಳ ಭೇಟಿ ಮಾಡಲಿದ್ದಾರೆ ಉಪೇಂದ್ರ: ಆದರೆ ಷರತ್ತು ಅನ್ವಯ!

ಶನಿವಾರ, 16 ಸೆಪ್ಟಂಬರ್ 2023 (09:10 IST)
ಬೆಂಗಳೂರು: ಸೆಪ್ಟೆಂಬರ್ 18 ಬಂತೆಂದರೆ ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೆ ಸಂಭ್ರಮ. ಯಾಕೆಂದರೆ ಇದೇ ದಿನ ರಿಯಲ್ ಸ್ಟಾರ್ ಬರ್ತ್ ಡೇ ಇದೆ.

ಈ ಬಾರಿ ಹುಟ್ಟುಹಬ್ಬವನ್ನು ಉಪೇಂದ್ರ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳಲಿದ್ದಾರೆ. ಆದರೆ ಒಂದು ಕಂಡೀಷನ್ ಕೂಡಾ ಅನ್ವಯವಾಗಲಿದೆ. ಅದೇನಂತೀರಾ?

ಬಹಳ ದಿನಗಳ ನಂತರ ತಾವು ನಿರ್ದೇಶಿಸಿ, ನಟಿಸಿರುವ ಯುಐ ಸಿನಿಮಾ ಟೀಸರ್ ನ್ನು ಉಪೇಂದ್ರ ಇದೇ ದಿನ ಸಂಜೆ ಊರ್ವಶಿ ಥಿಯೇಟರ್ ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಹೀಗಾಗಿ ಈ ಕೆಲಸಗಳಲ್ಲಿ ಬ್ಯುಸಿಯಿರುವ ಕಾರಣ ಸೋಮವಾರ ಬೆಳಿಗ್ಗೆ ಅಥವಾ ಹಿಂದಿನ ದಿನ ರಾತ್ರಿ ತಮ್ಮ ನಿವಾಸದ ಬಳಿ ಅವರು ಸಿಗಲ್ಲ. ಬದಲಾಗಿ ಮಧ‍್ಯಾಹ್ನ 2 ರಿಂದ ರಾತ್ರಿ 8 ಗಂಟೆಯವರೆಗೆ ಅಭಿಮಾನಿಗಳ ಜೊತೆ ಕಾಲ ಕಳೆಯಲಿರುವುದಾಗಿ ಸ್ವತಃ ಉಪೇಂದ್ರ ವಿಡಿಯೋ ಸಂದೇಶ ಮೂಲಕ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ