Vasuki Vaibhav: ತಾಯಂದಿರ ದಿನವೇ ಗುಡ್ ನ್ಯೂಸ್ ಹಂಚಿಕೊಂಡ ವಾಸುಕಿ ವೈಭವ್
ವಾಸುಕಿ ವೈಭವ್ ಮತ್ತು ಬೃಂದಾ ವಿಕ್ರಮ್ ದಂಪತಿ ಇಂದು ತಾಯಂದಿರ ದಿನದಂದು ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಖುಷಿ ಸುದ್ದಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ವಾಸುಕಿ ವೈಭವ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಬೃಂದಾ ಬೇಬಿ ಬಂಪ್ ಫೋಟೋ ಪ್ರಕಟಿಸಿರುವ ವಾಸುಕಿ ವೈಭವ್ ಎಲ್ಲಾ ತಾಯಂದಿರಿಗೂ ಶುಭಾಶಯಗಳು. ನೀವಿಲ್ಲದೇ ಇದ್ದಿದ್ದರೆ ಜಗತ್ತು ಈ ರೀತಿ ಇರುತ್ತಿರಲಿಲ್ಲ. ನನಗೆ ತಾಯಂದಿರ ದಿನ ವಿಶೇಷವಾಗಿದೆ. ಅಮ್ಮನಾಗುತ್ತಿರುವ ಹೊಸ ಸದಸ್ಯೆಯನ್ನು ನಿಮಗೆ ಪರಿಚಯಿಸುತ್ತಿದ್ದೇನೆ. ನಿಮ್ಮ ಹಾರೈಕೆ, ಆಶೀರ್ವಾದ, ಪ್ರೀತಿಯಿರಲಿ ಎಂದು ಬರೆದುಕೊಂಡಿದ್ದಾರೆ.
ವಾಸುಕಿಯ ಈ ಫೋಟೋಗೆ ಕ್ಷಣಾರ್ಧದಲ್ಲಿ ಸಾಕಷ್ಟು ಲೈಕ್ಸ್, ಶುಭಾಶಯಗಳ ಸಂದೇಶ ಬಂದಿದೆ. 2023 ರಲ್ಲಿ ಬೃಂದಾ ಜೊತೆ ವಾಸುಕಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.