ರಾಯಚೂರಿನಲ್ಲಿ `ವೇದ' ಟೀಸರ್ ರಿಲೀಸ್

ಶುಕ್ರವಾರ, 2 ಡಿಸೆಂಬರ್ 2022 (19:26 IST)
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾದ ಪ್ರಮೋಷನ್ ತುಂಬಾ ಚೆನ್ನಾಗಿಯೇ ಪ್ಲಾನ್ ಮಾಡಲಾಗಿದೆ. ಸಿನಿಮಾದ ಪ್ರತಿ ಪೋಸ್ಟರ್ ಒಂದೊಂದು ಕಥೆ ಹೇಳುತ್ತವೆ. ಸಿನಿಮಾದ ಟೀಸರ್ ಇಡೀ ಕಥೆಯ ಝಲಕ್ ಅನ್ನ ಬಿಟ್ಟುಕೊಡುತ್ತಿವೆ. ವೇದ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಿರೀಕ್ಷೆ ಮಾಡದ ರೀತಿಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ವೇದ ಹೆಸರಿನ ಪಾತ್ರ ಮಾಡೋ ಮೂಲಕ ಶಿವಣ್ಣ ತಮ್ಮ ಅಭಿನಯ ಕಲೆಯನ್ನ ಒರೆಗೆ ಹಚ್ಚಿದಂತೆ ಕಾಣುತ್ತಿದ್ದಾರೆ. ವೇದ ಚಿತ್ರದ ಪ್ರಚಾರದ ಪ್ಲಾನಿಂಗ್ ಪಕ್ಕಾ ಆಗಿಯೇ ಇದೆ. ನಿರ್ದೇಶಕ ಎ.ಹರ್ಷ ತಮ್ಮ ಈ ಚಿತ್ರವನ್ನ ಪ್ಲಾನ್ ಮಾಡಿಕೊಂಡೇ ಪ್ರೊಮೋಶನ್​​​ ಮಾಡುತ್ತಿದ್ದಾರೆ. ಅದರಂತೆ ಟೀಸರ್​​ಗೂ ಒಂದೊಂದು ಥೀಮ್​ ಟೈಟಲ್ ಕೂಡ ಇಟ್ಟಿದ್ದಾರೆ. ನಾಳೆ ಅಂದ್ರೆ ಡಿಸೆಂಬರ್​​​​ 3ಕ್ಕೆ  ರಾಯಚೂರಿನಲ್ಲಿ ವೇದ ಸಿನಿಮಾದ ಟೀಸರ್ ರಿಲೀಸ್ ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ