ರಶ್ಮಿಕಾಗೆ ಠೂ ಸಮಂತಾ ಜೊತೆ ಕ್ಲೋಸ್ ವಿಜಯ್ ದೇವರಕೊಂಡ

ಶುಕ್ರವಾರ, 12 ಮೇ 2023 (18:57 IST)
Photo Courtesy: Twitter

ಹೈದರಾಬಾದ್: ರಶ್ಮಿಕಾ ಮಂದಣ್ಣ ಜೊತೆ ಠೂ ಮಾಡಿಕೊಂಡು ವಿಜಯ್ ದೇವರಕೊಂಡ ಈಗ ಸಮಂತಾ ಜೊತೆ ಕ್ಲೋಸ್ ಆಗಿದ್ದಾರಾ? ಹೀಗೊಂದು ಅನುಮಾನ ಫ್ಯಾನ್ಸ್ ಗೆ ಬಂದಿದೆ.

ಇದಕ್ಕೆ ಕಾರಣ ಇತ್ತೀಚೆಗೆ ವಿಜಯ್‍ ದೇವರಕೊಂಡ ಹುಟ್ಟುಹಬ್ಬಕ್ಕೆ ರಶ್ಮಿಕಾ ವಿಶ್ ಮಾಡಿರಲಿಲ್ಲ. ಸಾಮಾನ್ಯವಾಗಿ ವಿಜಯ್ ಹುಟ್ಟುಹಬ್ಬಕ್ಕೆ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಶುಭ ಹಾರೈಸುತ್ತಾರೆ. ಆದರೆ ಈ ಬಾರಿ ವಿಶ್ ಮಾಡಲಿಲ್ಲ. ಇದಕ್ಕೆ ಮೊದಲು ರಶ್ಮಿಕಾ ಹುಟ್ಟುಹಬ್ಬಕ್ಕೂ ವಿಜಯ್ ವಿಶ್‍ ಮಾಡಿರಲಿಲ್ಲ.

ಇದೀಗ ವಿಜಯ್ ‘ಖುಷಿ’ ಕೋ ಸ್ಟಾರ್ ಸಮಂತಾ ಪ್ರಭು ಜೊತೆಗಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಮಂದಿ ರಶ್ಮಿಕಾಗೆ ಕೈ ಕೊಟ್ಟು ಈಗ ಸಮಂತಾ ಜೊತೆ ಕ್ಲೋಸ್ ಆಗಿದ್ದಾರೆ ಎಂದು ಅಂದುಕೊಳ್ಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ