ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಅವರಿಗೆ ಸಿಕ್ಕ ಉಡುಗೊರೆ ಏನು ಗೊತ್ತಾ...?
ಭಾನುವಾರ, 14 ಜನವರಿ 2018 (08:01 IST)
ಬೆಂಗಳೂರು : ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಅವರಿಗೆ ಖ್ಯಾತ ಸಂಗೀತ ನಿರ್ದೇಶಕರಾದ ಎ.ಆರ್ ರೆಹಮಾನ್ ಅವರೇ ಸ್ಪೂರ್ತಿ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ಇಂಪನಾ ಜಯರಾಜ್ ಅವರು ರೆಹಮಾನ್ ಅವರ 7 ಅಡಿ ಎತ್ತರದ ಭಾವಚಿತ್ರವನ್ನು ರಚಿಸಿದ್ದು ಅದನ್ನು ಈಗ ಅರ್ಜುನ್ ಜನ್ಯ ಅವರು ಪಡೆದಿದ್ದಾರೆ. ಅದರಲ್ಲಿ ರೆಹಮಾನ್ ಅವರು ಸಹಿ ಮಾಡಿದ್ದನ್ನು ಕಂಡು ಜನ್ಯ ಅವರು ತುಂಬಾ ಸಂತೋಷಗೊಂಡಿದ್ದಾರೆ.
‘ತಂದೆಯ ಆಸೆ ರೆಹಮಾನ್ ಅವರಂತೆ ನಾನು ಕೂಡ ಸಂಗೀತ ನಿರ್ದೇಶಕನಾಗಬೇಕು ಎನ್ನುವುದಾಗಿತ್ತು. ಇದೇ ಗುರಿಯ ಹಿಂದೆ ನಾನು ಹೋದೆ. ಆದ್ದರಿಂದ ಇಂದು ನಾನು ಒಬ್ಬ ಸಂಗೀತ ನಿರ್ದೇಶಕನಾಗಿದ್ದೇನೆ. ರೆಹಮಾನ್ ಅವರು ಇಲ್ಲದೆ ಹೋಗಿದ್ದರೆ, ನಾನು ಕೂಡ ಸಂಗೀತ ನಿರ್ದೇಶಕನಾಗುತ್ತಿರಲಿಲ್ಲವೇನೋ’ ಎಂದು ಅರ್ಜುನ್ ಜನ್ಯ ಅವರು ಹೇಳಿದ್ದರು. ಈಗ ಆ ಪೇಯಿಂಟಿಂಗ್ ಅನ್ನು ತಮ್ಮ ಆಫೀಸ್ ನಲ್ಲಿ ಇರಿಸುವುದಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ