ನರೇಂದ್ರ ಮೋದಿಗೆ ಇಸ್ರೇಲ್ ಪ್ರಧಾನಿ ಕೊಡಲಿರುವ ಉಡುಗೊರೆ ಏನು ಗೊತ್ತಾ...?
ಶುಕ್ರವಾರ, 5 ಜನವರಿ 2018 (11:32 IST)
ಇಸ್ರೇಲ್ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೆಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ನೀರಿನಲ್ಲಿರುವ ಉಪ್ಪಿನಾಂಶವನ್ನು ಬೇರ್ಪಡಿಸಿ ಶುದ್ಧಿಕರಿಸುವ ವಾಹನವೊಂದನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಜುಲೈನಲ್ಲಿ ಮೋದಿ ಅವರು ಇಸ್ರೆಲ್ ದೇಶಕ್ಕೆ ಭೇಟಿ ನೀಡಿದಾಗ ಓಲ್ಗಾ ಸಮುದ್ರ ತೀರದಲ್ಲಿ ಈ ವಾಹನದಲ್ಲೇ ಕುಳಿತು ಸಂಚರಿಸಿದ್ದು, ಇದನ್ನೆ ವಿಶೇಷ ಉಡುಗೊರೆಯಾಗಿ ಜನವರಿ 14 ರಂದು ಭಾರತದ ಪ್ರವಾಸದ ವೇಳೆ ನೇತನ್ಯಾಹು ಅವರು ಮೋದಿಯವರಿಗೆ ನೀಡಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಇಸ್ರೆಲ್ ನ ಓಲ್ಗಾ ಸಮುದ್ರ ತೀರದಲ್ಲಿರುವ ನೀರಿನಿಂದ ಲವಣಾಂಶ ಬೇರ್ಪಡಿಸುವ ಘಟಕಕ್ಕೆ ಮೋದಿ ಅವರು ಭೇಟಿ ನೀಡಿದಾಗ ಪಡೆದ ಮಾಹಿತಿ ಪ್ರಕಾರ ಈ ವಾಹನದ ಬೆಲೆ ಸುಮಾರು ರೂ. 70ಲಕ್ಷ ಎಂಬುದಾಗಿ ತಿಳಿದಿದೆ. ಇದನ್ನು ಉತ್ತಮ ಗುಣಮಟ್ಟದ ಶುದ್ಧ ನೀರನ್ನು ಉತ್ಪಾದಿಸುವ ಉದ್ದೇಶದಿಂದ ತಯಾರಿಸಲಾಗಿದೆ. ಇದು ದಿನಕ್ಕೆ 20 ಸಾವಿರ ಲೀಟರ್ ಉಪ್ಪು ನೀರು ಹಾಗು 80 ಸಾವಿರ ಲೀಟರ್ ಕಲುಷಿತ ನೀರನ್ನು ಶುಚಿಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಇದು ಭೂಕಂಪ, ಪ್ರವಾಹದಂತಹ ನೈಸರ್ಗಿಕ ವಿಕೋಪಗಳಾದ ಸಂದರ್ಭದಲ್ಲಿ ಜನರಿಗೆ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ