Vijay Prakash: ಲವ ಲವಿಕೆಯಿಂದಿದ್ದ ಗಾಯಕ ವಿಜಯ್ ಪ್ರಕಾಶ್ ಗೆ ಇದ್ದಕ್ಕಿದ್ದಂತೆ ಏನಾಯ್ತು, ಫೋಟೋ ನೋಡಿ
ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಲವು ಸೂಪರ್ ಹಿಟ್ ಹಾಡುಗಳನ್ನು ಕೊಟ್ಟವರು. ಕನ್ನಡದ ಹೆಮ್ಮೆಯ ಗಾಯಕನಿಗೆ ಈಗ ಹುಷಾರಿಲ್ಲ. ಅಂತಹದ್ದೇನಾಗಿದೆ ಎಂಬ ಆತಂಕಕ್ಕೆ ಅವರೇ ಉತ್ತರ ಕೊಟ್ಟಿದ್ದಾರೆ.
ವಿಜಯ್ ಪ್ರಕಾಶ್ ನಿನ್ನೆ ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಓಪನಿಂಗ್ ಮ್ಯಾಚ್ ಗೆ ಮುನ್ನ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದು, ಸದ್ಯಕ್ಕೆ ಪ್ಲಾಸ್ಟರ್ ಹಾಕಲಾಗಿದೆ. ಇದೀಗ ಅವರಿಗೆ ಎದ್ದು ಓಡಾಡಲು ಕಷ್ಟಪಡುವ ಸ್ಥಿತಿಯಾಗಿದೆ. ಇದನ್ನು ಅವರೇ ಫೋಟೋ ಸಮೇತ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.