ದುನಿಯಾ ವಿಜಯ್ ಬಗ್ಗೆ ಮತ್ತಷ್ಟು ಸ್ಪೋಟಕ ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆದಿರುವ ಮೊದಲ ಪತ್ನಿ ನಾಗರತ್ನ
ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಇಂದು ಸಂಜೆ ಪತ್ರಿಕಾಗೋಷ್ಠಿ ಕರೆದಿದ್ದು, ಅದರಲ್ಲಿ ವಿಜಯ್ ಬಗ್ಗೆ ಮತ್ತಷ್ಟು ಸ್ಪೋಟಕ ಮಾಹಿತಿ ಹೊರಹಾಕುವುದಾಗಿ ಹೇಳಿದ್ದಾರೆ.
ಕೀರ್ತಿ ಗೌಡರನ್ನು ವಿಜಿ ಮದುವೆಯೇ ಆಗಿಲ್ಲ ಎಂಬ ಸ್ಪೋಟಕ ಸತ್ಯ ಹೇಳಿರುವ ನಾಗರತ್ನ ಈ ಕುರಿತಂತೆ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಇಂದು ಸಂಜೆ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಮತ್ತಷ್ಟು ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಈಗಾಗಲೇ ದುನಿಯಾ ವಿಜಿ ತನ್ನ ಹೊರತಾಗಿ ಐವರು ಹುಡುಗಿಯರ ಜತೆ ಸಂಬಂಧ ಹೊಂದಿದ್ದರು ಎಂದು ನಾಗರತ್ನ ಹೇಳಿ ನಟನ ವೈಯಕ್ತಿಕ ಬದುಕನ್ನು ಬಟಾ ಬಯಲು ಮಾಡಿದ್ದರು. ಇಂದು ಮತ್ತೆ ಅದೇನು ಹೇಳಲಿದ್ದಾರೆ ಎನ್ನುವ ಕುತೂಹಲ ಇದೀಗ ಮೂಡಿದೆ.