ಮೇಘನಾ – ಚಿರು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಲು ಕಾರಣವೇನು ಗೊತ್ತಾ…?
ಬುಧವಾರ, 2 ಮೇ 2018 (06:39 IST)
ಬೆಂಗಳೂರು : ಭಾನುವಾರದಂದುಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಅವರು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ಮಾಡಿಕೊಂಡಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದೇ ಇದೆ. ಆದರೆ ಅವರು ಯಾಕೆ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾದರೂ ಎಂಬ ಪ್ರಶ್ನೆ ಹಲವರಲ್ಲಿದೆ.
ಹೌದು. ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಅವರು ಬೆಂಗಳೂರು ಕೋರಮಂಗಲದ ಸೇಂಟ್ ಆಂಥೋನಿಸ್ ಫೈರಿ ಚರ್ಚ್ ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ಮಾಡಿಕೊಂಡಿದ್ದು, ಮೇ 2 ರಂದು ಹಿಂದೂ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ. ಆದರೆ ಇವರು ಮೊದಲು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಲೂ ಕಾರಣವೆನೆಂದರೆ ಮೇಘನಾ ರಾಜ್ ಅವರ ಅಮ್ಮ ಪ್ರಮಿಳಾ ಅವರು ಕ್ರಿಶ್ಚಿಯನ್ ಆಗಿದ್ದು ಹಾಗೇ ಅಪ್ಪ ಸುಂದರ ರಾಜ್ ಅವರು ಹಿಂದೂ ಹಾಗಾಗಿ ಎರಡೂ ಧರ್ಮದಂತೆ ಎರಡೂ ಬಾರಿ ಮದುವೆಯಾಗಲಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ