ನಟಿ ರಾಧಿಕಾ ಪಂಡಿತ್ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ ಫೋಟೋ ಯಾವುದು ಗೊತ್ತಾ…?
ಗುರುವಾರ, 29 ಮಾರ್ಚ್ 2018 (06:05 IST)
ಬೆಂಗಳೂರು : ಈ ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಕರೆಕಟ್ಟೆಗಳೆಲ್ಲ ಬತ್ತಿ ಹೋಗಿರುತ್ತವೆ. ಇದರಿಂದಾಗಿ ಪ್ರಾಣಿ ಪಕ್ಷಿಗಳಿಗೆ ನೀರು ಸಿಗದೇ ಸಾವನ್ನಪ್ಪುತ್ತಿವೆ. ಆದಕಾರಣ ಇದನ್ನರಿತ ನಟಿ ರಾಧಿಕಾ ಪಂಡಿತ್ ಅವರು ಅವುಗಳ ರಕ್ಷಣೆಗೆ ಮುಂದಾಗಿದ್ದಾರೆ.
ನಟಿ ರಾಧಿಕಾ ಅವರು ತಮ್ಮ ಮನೆಯ ಅಂಗಳದಲ್ಲಿ ಪಕ್ಷಿಗಳಿಗಾಗಿ ಒಂದು ಪಾತ್ರೆಯಲ್ಲಿ ನೀರನ್ನು ಇಟ್ಟು ಅವುಗಳ ದಾಹವನ್ನು ತಣಿಸಿ ಈ ಮೂಲಕ ಅವುಗಳ ರಕ್ಷಣೆ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋವೊಂದನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿ,’ ಬೇಸಿಗೆ ಆರಂಭ ಆಗಿದೆ, ಬಿಸಿಲಿನಿಂದ ಪಕ್ಷಿಗಳಿಗೆ ಎಲ್ಲಿಯೂ ನೀರು ಸಿಗದಂತೆ ಆಗಿದೆ. ಆದ್ದರಿಂದ ನಾನು ನಮ್ಮ ಮನೆಯಂಗಳದಲ್ಲಿ ನೀರನ್ನು ಪಕ್ಷಿಗಳಿಗಾಗಿ ಇರಿಸಿದ್ದೇನೆ ನೀವು ಕೂಡ ಈ ರೀತಿ ಮಾಡಬಹುದು’ ಎಂದು ತಮ್ಮ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ