ಬೆವರಿನ ವಾಸನೆಯಿದ ಮುಕ್ತಿ ಪಡೆಯಬೇಕಾ...? ಇಲ್ಲಿದೆ ನೋಡಿ ಟಿಪ್ಸ್
ಬುಧವಾರ, 28 ಮಾರ್ಚ್ 2018 (13:44 IST)
ಬೆಂಗಳೂರು : ಬೇಸಿಗೆ ಕಾಲದಲ್ಲಿ ಬಿಸಿಲಿನ ಬೇಗೆಯಿಂದ ಶರೀರದಿಂದ ಬರುವ ಬೆವರು ನೀಡುವ ಬಾಧೆಯಂತು ಹೇಳತೀರದು. ಅದರಲ್ಲೂ ದೇಹದಿಂದ ಹೊರಸೂಸುವ ಬೇವರಿನ ವಾಸನೆಯಿಂದ ಬಹಳಷ್ಟು ಮಂದಿ ಮುಜುಗರಪಡುವುದು ಸಾಮಾನ್ಯವೇ ಆಗಿದೆ. ಆದರೆ ಇವುಗಳಿಗೆಲ್ಲ ಸುಲಭವಾದ ಪರಿಹಾರ ಕಂಡುಕೊಳ್ಳುವ ಬದಲು ಕೆಮಿಕಲ್ ಯಕ್ತವಾದ ವಸ್ತುಗಳ ಮೇಲೆ ಮಾರು ಹೋಗಿ ಹಣ ಹಾಳು ಮಾಡುವುದರ ಜತೆಗೆ ಚರ್ಮದ ಕಾಂತಿಯನ್ನು ಕಳೆದುಕೊಳ್ಳುತ್ತೇವೆ. ಹಾಗಾಗಿ ತೊಂದರೆಗೆ ಸಿಲುಕುವ ಬದಲು ಸುಲಭ ಉಪಾಯ ಇಲ್ಲಿದೆ.
ಡಿಯೋಡ್ರಂಟ್ ಬದಲು ಹತ್ತಿಯನ್ನು ಆ್ಯಪಲ್ ಸೈಡರ್ ವಿನೆಗರ್ ನಿಂದ ೊದ್ದೆ ಮಾಡಿ ಕಂಕುಳಕ್ಕೆ ಹಚ್ಚಿರಿ.
ಬ್ಯಾಕ್ಟೀರಿಯಾಗಳನ್ನು ಹೊಡೆದೊಡಿಸುವಲ್ಲಿ ನಿಂಬೆ ಹಣ್ಣು ಕೂಡ ಪ್ರಭಾವಶಾಲಿಯಾಗಿದೆ. ನಿಂಬೆ ಹಣ್ಣನ್ನು ಎರಡು ಭಾಗ ಮಾಡಿ, ಒಂದು ಭಾಗವನ್ನು ಕಂಕುಳಕ್ಕೆ ಉಜ್ಜಿ ಅದರ ರಸವು ಕಂಕುಳದಲ್ಲಿಯೇ ಒಣಗಲು ಬಿಡಿ. ಸಂಪೂರ್ಣವಾಗಿ ಒಣಗಿದ ನಂತರ ಸ್ನಾನ ಮಾಡಿ ಕಂಕುಳದ ವಾಸನೆ ಸಂಪೂರ್ಣವಾಗಿ ಮಾಯವಾಗುವ ತನಕ ಪ್ರತಿದಿನಕ್ಕೊಂದು ಬಾರಿ ಮಾಡಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ