ಯಜಮಾನ ಚಿತ್ರದ ಚಿತ್ರಿಕರಣದಿಂದ ದರ್ಶನ್ ಬ್ರೇಕ್ ತೆಗೆದುಕೊಂಡಿದ್ಯಾಕೆ ಗೊತ್ತಾ?

ಸೋಮವಾರ, 14 ಮೇ 2018 (16:39 IST)
ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಚಿತ್ರಿಕರಣ ಭರದಿಂದ ಸಾಗುತ್ತಿದ್ದು, ಇದೀಗ ದರ್ಶನ್ ಅವರು ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದಾರಂತೆ.


ಈ ಹಿಂದೆ ಚಿತ್ರೀಕರಣದ ಸಮಯದಲ್ಲಿ ದರ್ಶನ್ ಕೈಗೆ ಗಾಯ ಮಾಡಿಕೊಂಡಿದ್ದರು. ಆದರೆ ಈಗ ಚಿಕ್ಕಮಗಳೂರಿನಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವಾಗ ಹಳೆಯ ನೋವು ಕಾಣಿಸಿಕೊಂಡಿದೆ. ಹಾಗಾಗಿ ದರ್ಶನ್ ಹಾಗೂ ಚಿತ್ರತಂಡ ಮೇ 2ರಿಂದ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದಾರಂತೆ.


ಇತ್ತೀಚೆಗೆ ನಡೆದ ವಿನೋದ್ ಪ್ರಭಾಕರ್ ಸಿನಿಮಾದ ಮೂಹರ್ತದಲ್ಲಿ ದರ್ಶನ್ ಆಗಮಿಸಿದ್ದ ಸಂದರ್ಭದಲ್ಲಿ  ಅವರ ಕೈಗೆ ಪೆಟ್ಟಾಗಿರುವುದು ತಿಳಿದು ಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ