ತೆಲುಗಿನ ಖ್ಯಾತ ನಟನ ಪತ್ನಿ ಹಾಗೂ ನಟಿ ಸಮಂತಾ ಜತೆ ಸೇರಿದ್ದು ಯಾಕೆ?

ಮಂಗಳವಾರ, 22 ಸೆಪ್ಟಂಬರ್ 2020 (13:22 IST)
ಹೈದರಾಬಾದ್ : ನಟಿ ಸಮಂತಾ ಅವರು ತೆಲುಗಿನ ಖ್ಯಾತ ನಟನ ಪತ್ನಿಯ ಜೊತೆ  ಆರೋಗ್ಯ ಸಂಬಂಧಿತ ಪೋರ್ಟೆಲ್ ನ್ನು ಪ್ರಾರಂಭಿಸಲು ಹೊರಟಿದ್ದಾರೆ.

ಲಾಕ್ ಡೌನ್ ನಿಂದಾಗಿ ಮನೆಯಲ್ಲಿರುವ ನಟಿ ಸಮಂತಾ ಸಮಯ ಕಳೆಯಲು ಸಾವಯವ ತರಕಾರಿಗಳನ್ನು ಬೆಳೆಸುತ್ತಿದ್ದಾರೆ. ಆದರೆ ಇದೀಗ  ಆರೋಗ್ಯ ಸಂಬಂಧಿತ ಪೋರ್ಟೆಲ್ ನ್ನು ಪ್ರಾರಂಭಿಸಲು  ಹೊರಟ ಸಮಂತಾ ಜೊತೆ ಇದೀಗ ನಟ ರಾಮ್ ಚರಣ್ ತೇಜ ಅವರ ಪತ್ನಿ ಉಪಾಸನ ಕೂಡ ಕೈಜೋಡಿಸಿದ್ದಾರೆ.

ಈ ಆರೋಗ್ಯ ಸಂಬಂಧಿತ  ಪೋರ್ಟಲ್ ನಲ್ಲಿ ಆರೋಗ್ಯಕರವಾದ ಜೀವನಶೈಲಿಯ ಆಯ್ಕೆ ಉತ್ತೇಜಿಸಲು ತಜ್ಞರಿಂದ ಮಾಹಿತಿ ನೀಡಲಾಗುವುದು. ಉಪಾಶನ ಕೊನಿಡೆಲಾ ಅಪೊಲೊ ಆಸ್ಪತ್ರೆಯ ಗ್ರೂಪ್ ಫ್ಯಾಮಿಲಿಯಿಂದ ಬಂದಿದ್ದು, ಅವರಿಗೆ ಆರೋಗ್ಯದ ಬಗ್ಗೆ ಮಾಹಿತಿ ಇರುವುದರಿಂದ  ಈ ಹೊಸ ಉದ್ಯಮದಲ್ಲಿ ತಮ್ಮ ಪರಿಣತಿಯನ್ನು ತೋರಿಸಲು ಹೊರಟಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ