ಅನಿರೀಕ್ಷಿತ ಅಚ್ಚರಿ ಕೊಟ್ಟ ಯುವರತ್ನ ಚಿತ್ರತಂಡ: ಪುನೀತ್ ಡ್ಯಾನ್ಸ್ ಗೆ ಫ್ಯಾನ್ಸ್ ಫಿದಾ

ಶನಿವಾರ, 28 ನವೆಂಬರ್ 2020 (09:24 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಚಿತ್ರತಂಡ ಅಭಿಮಾನಿಗಳಿಗೆ ನಿನ್ನೆ ಸಂಜೆ ಯಾರೂ ನಿರೀಕ್ಷಿಸಿದ ಅಚ್ಚರಿಯ ಉಡುಗೊರೆಯೊಂದನ್ನು ನೀಡಿದೆ.


ಯುವರತ್ನ ಚಿತ್ರದ ಪವರ್ ಆಫ್ ಯೂಥ್ ಹಾಡು ಇದೇ ಡಿಸೆಂಬರ್ 2 ರಂದು ಲಾಂಚ್ ಮಾಡುವುದಾಗಿ ಈಗಾಗಲೇ ಚಿತ್ರತಂಡ ಘೋಷಿಸಿತ್ತು. ಆ ಹಾಡು ಹೇಗಿರಬಹುದು ಎಂಬ ಕುತೂಹಲ ತಣಿಸಲು ಚಿತ್ರತಂಡ ನಿನ್ನೆ ಪ್ರೋಮೋ ಒಂದನ್ನು ಹರಿಯಬಿಟ್ಟಿದೆ. ಇದನ್ನು ನೋಡಿದ ನೆಟ್ಟಿಗರು ಪುನೀತ್ ಡ್ಯಾನ್ಸ್, ತಮನ್ ಹಾಡಿನ ಮೋಡಿಗೆ ಫಿದಾ ಆಗಿದ್ದಾರೆ. ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಈ ಪ್ರೋಮೋ ಬಿಡುಗಡೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ