ಸಂಯುಕ್ತಾಗೆ ಮೈತುಂಬಾ ಬಟ್ಟೆ ಹಾಕಮ್ಮ ಎಂದ ನೆಟ್ಟಿಗರು

ಭಾನುವಾರ, 1 ಅಕ್ಟೋಬರ್ 2023 (20:01 IST)
ಕಿರಿಕ್ ಬ್ಯೂಟಿ ಸಂಯುಕ್ತಾ ಹೆಗ್ಡೆ  ಜೊತೆ ‘ಬಿಗ್ ಬಾಸ್’ ಖ್ಯಾತಿಯ ಕಿಶನ್ ಬಿಳಗಲಿ ಡ್ಯಾನ್ಸ್ ಮಾಡಿರೋದು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಆಗಿದೆ. ರೊಮ್ಯಾಂಟಿಕ್ ಹಾಡಿಗೆ ಇಬ್ಬರು ಕುಣಿದು ಕುಪ್ಪಳಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಸಂಯುಕ್ತಾಗೆ ಮೈತುಂಬಾ ಬಟ್ಟೆ ಹಾಕಮ್ಮ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಜಂಗ್ಲಿ ಸಿನಿಮಾದ ನೀನೆಂದರೆ ನನ್ನೊಳಗೆ ಎಂಬ ಹಾಡಿಗೆ ಕಿಶನ್ ಜೊತೆ ನಟಿ ಸೊಂಟ ಬಳುಕಿಸಿದ್ದಾರೆ. ಇಬ್ಬರು ಬಿಳಿ ಬಣ್ಣದ ಉಡುಗೆಯಲ್ಲಿ ಹೈಲೆಟ್‌ ಆಗಿದ್ದು,ಈ ರೊಮ್ಯಾಂಟಿಕ್ ವಿಡಿಯೋ ನೋಡಿ, ಸರಿಯಾಗಿ ಬಟ್ಟೆ ಹಾಕಮ್ಮ ಇದೆಲ್ಲಾ ನಿನಗೆ ಬೇಕಾ? ಎಂದು ನಟಿಗೆ ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಪುಲ್  ಕ್ಲಾಸ್ ತೆಗೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ