ಬಟ್ಟೆ ಕದ್ದ ಬುರ್ಖಾ ಮಹಿಳೆ

ಶನಿವಾರ, 15 ಅಕ್ಟೋಬರ್ 2022 (19:46 IST)
ಮಂಗಳೂರಿನ ಟೆಕ್ಸ್​​​ಟೈಲ್ಸ್​​ ಮಳಿಗೆಯಲ್ಲಿ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ಹೊಸ ಬಟ್ಟೆಯನ್ನು ಕಳವು ಮಾಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಕಾವೂರಿನ ಸಂಧ್ಯಾ ಟೆಕ್ಸ್ ಟೈಲ್ಸ್ ಮಳಿಗೆಯಲ್ಲಿ ಸೆಪ್ಪೆಂಬರ್‌ 26ರಂದು ಘಟನೆ ನಡೆದಿದ್ದು, ಟೆಕ್ಸ್‌ಟೆಲ್ಸ್‌ ಸಿಬ್ಬಂದಿಯ ಕಣ್ತಪ್ಪಿಸಿ ಮಹಿಳೆ ಬುರ್ಖಾದೊಳಗೆ ಬಟ್ಟೆಯ ಕಟ್ಟನ್ನು ಸೇರಿಸಿಕೊಳ್ಳುವುದು ಕಂಡು ಬಂದಿದೆ. ಈ ಬಗ್ಗೆ ಸಿಸಿಟಿವಿ ಗಮನಿಸಿದ ಅಂಗಡಿ ಮಾಲೀಕ ಸಂದೇಶ್ ಶೆಟ್ಟಿ ಕಾವೂರು ಠಾಣೆಗೆ ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ