ರವಿವಾರ

PTI
ಬಂದಿತು ಎಂದರೆ ರವಿವಾರ
ಮಕ್ಕಳು ಕುಲುಕುಲು ನಗುತಾರ
ಎಂಟು ಗಂಟೆಗೆ ಎಳುತಾರಾ

ಕುರುಕುರು ತಿಂಡಿ ಕೇಳುತಾರಾ
ಟೀವಿಯಲಿ ದೃಷ್ಟಿ ನೆಡುತಾರಾ
ಅದು-ಇದು ನೋಡಿ ಕೆಡುತಾರಾ

ಚೆಂಡು, ಬ್ಯಾಟುಗಳ ಹಿಡಿತಾರಾ
ಕಿಟಕಿಯ ಗಾಜನು ಒಡಿತಾರಾ
ಶಾಲೆ ಪಾಠಗಳ ಮರಿತಾರಾ

ದಿನವು ಮುಗಿಯೆ ಬೇರಿತಾರಾ
ವಾರಕೆ ಬಹಳ ರವಿವಾರ
ಇರಬೇಕಿತ್ತು ಎನುತಾರಾ

-ಗುರುರಾಜ ಬೆಣಕಲ್

ವೆಬ್ದುನಿಯಾವನ್ನು ಓದಿ