ಮುದಿ ಹಿಮ ತಾಯಿ

PTI
ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬ ಮಹಿಳೆ ಇದ್ದಳು ಅವಳಿಗೆ ಇಬ್ಬರು ಮಕ್ಕಳಿದ್ದರು. ಒಬ್ಬಾಕೆ ಸುಂದರ ಹಾಗೂ ಉದ್ಯೋಗಶೀಲೆಯಾಗಿದ್ದರೆ, ಇನ್ನೊಬ್ಬಾಕೆ ಕುರೂಪಿ ಮತ್ತು ಆಲಸಿಯಾಗಿದ್ದಳು.

ಕುರೂಪಿ ಮಗಳು ತನ್ನದೇ ಮಗಳಾಗಿದ್ದರಿಂದ ಆ ಮಹಿಳೆ ಅವಳ ಜತೆ ಬಹಳ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದಳು. ಆದರೆ ಸುಂದರ ಕುಮಾರಿಯ ಜತೆ ಬಹಳ ಕ್ರೂರವಾಗಿ ನಡೆಯುತ್ತಿದ್ದಳು. ಅವಳನ್ನು ಮನೆಯ ಕೆಲಸದಾಕೆಯಾಗಿ ಮಾಡಿದ್ದಳು.ಸುಂದರ ಕುಮಾರಿಯನ್ನು ಮಹಿಳೆ, ರಸ್ಥೆ ಬದಿಯಲ್ಲಿದ್ದ ಭಾವಿಯ ಸಮೀಪ ಹೋಗಿ ನೂಲು ಹೊಸೆಯುವಂತೆ ಹೇಳುತ್ತಿದ್ದಳು.

ಒಂದು ಸಲ ನೂಲು ಹೊಸೆದು ಕೈಯಲ್ಲಿ ರಕ್ತ ಬಂದು ಕಡರು ರಕ್ತಮಯವಾಯಿತು. ಈ ರಕ್ತಮಯ ಕಡರನ್ನು ಸಮೀಪದಲ್ಲಿದ್ದ ಬಾವಿಯ ನೀರಿನಿಂದ ತೊಳೆಯಲು ಪ್ರಯತ್ನಿಸುತ್ತಿರುವಾಗ ಕುಮಾರಿಯ ಕೈಯಿಂದ ಆ ಕಡರ ಬಾವಿಗೆ ಬಿತ್ತು.

ಅಳುತ್ತಾ ಮಲತಾಯಿತ್ತ ಹೋಗಿ, ನಡೆದ ಘಟನೆಯನ್ನು ವಿವರಿಸಿದಳು. ಇದರಿಂದ ಸಿಟ್ಟುಗೊಂಡ ಮಲತಾಯಿ ಅವಳಿಗೆ ಬಯ್ದು, ಅವಳ ಜತೆ ಅತಿ ಕ್ರೂರವಾಗಿ ವರ್ತಿಸಿದಳು ಮತ್ತು ಕೊನೆಯಲ್ಲಿ ಆ ಕಡರವನ್ನು ಭಾವಿಯಿಂದ ಹೊರತರಬೇಕು ಎಂದು ಗದರಿದಳು. ನಂತರ ಕುಮಾರಿ ಏನು ಮಾಡುವುದುದೆಂಬುದು ತೋಚದೆ, ಹತಾಶೆಯಿಂದ ಆ ಕಡರವನ್ನು ಹೊರತೆಗೆಯಲು ಹಿಂದೂ ಮುಂದೂ ನೋಡದೆ ಬಾವಿಗೆ ಹಾರಿದಳು. ಅವಳು ಬಾವಿಗೆ ಹಾರಿದ ಕೂಡಲೇ ಪ್ರಜ್ಞಾಶೂನ್ಯಳಾದಳು.

ಕಣ್ಣು ತೆರೆದಾಗ ಅವಳು ಹುಲ್ಲುಗಾವಲಿನಿಂದ ಕೂಡಿದ್ದ ಒಂದು ಸುಂದರ ಪ್ರದೇಶದಲ್ಲಿ ಇದ್ದಳು. ಹೀಗೆ ಅಚ್ಚರಿಯಿಂದ ನಡೆದು ಕೊಂಡು ಹೋಗುತ್ತಿರುವಾಗ ಬ್ರೆಡ್‌ವೊಂದು ಬೇಕರಿಯ ಒಲೆಯಲ್ಲಿ ಅಳುತ್ತಿರುವುದು ಕೇಳಿಸಿತು. ಅದು ನನ್ನನ್ನು ಇಲ್ಲಿಂದ ಏಳಿಸಿ, ನಾನು ಸಾಕಷ್ಟು ಕಾದಿದ್ದೇನೆ. ಇನ್ನು ನಾನಿಲ್ಲಿದ್ದರೆ ಹೊತ್ತಿಹೋಗುತ್ತೇನೆ ಎಂದು ಕೂಗಾಡುತ್ತಿತ್ತು. ಅದನ್ನು ಕೇಳಿದ ಅವಳು ಅತ್ತ ಹೋಗಿ ಬ್ರೆಡ್‌ನ್ನು ಒಂದೊಂದಾಗಿ ಒಲೆಯಿಂದ ಹೊರಎಳೆದಳು.

ಹೀಗೆ ಮುಂದೆ ಸಾಗುತ್ತಿರುವಾಗ ಸೇಬಿನ ಮರವೊಂದು ಎದುರಾಯಿತು. ಸೇಬಿನ ಮರ ನನ್ನನ್ನು ಅಲ್ಲಾಡಿಸಿ. ನನ್ನ ಕಾಂಡಗಳಲ್ಲಿರುವ ಸೇಬುಗಳು ಬೆಳೆದಿದೆ ಎಂದು ಗೋಗರೆಯುತ್ತಿತ್ತು. ಆಕೆ ಎಲ್ಲಾ ಸೇಬುಹಣ್ಣುಗಳನ್ನೂ ಕೆಳಗೆ ಬೀಳುವವರೆಗೆ ಮರವನ್ನು ಸರಿಯಾಗಿ ಅಲ್ಲಾಡಿಸಿ ಬಿದ್ದ ಎಲ್ಲಾ ಹಣ್ಣುಗಳನ್ನು ಒಂದು ಗೂಡಿಸಿ ಮುಂದೆ ಸಾಗಿದಳು.

ಅಂತಿಮವಾಗಿ ಅವಳು ಒಂದು ಗುಡಿಸಲಿನ ಹತ್ತಿರ ಬಂದಳು. ಅಲ್ಲಿ ಮುದುಕಿಯೊಬ್ಬಳು ಇಣುಕುತ್ತಾ ಇದ್ದಳು. ಮುದುಕಿ ಉದ್ದದ ಹಲ್ಲುಗಳನ್ನು ಹೊಂದಿದ ಕಾರಣ ಸುಂದರಿ ಭಯದಿಂದ ಓಡಲು ಶುರುಹಚ್ಚಿದಳು. ಇದನ್ನು ನೋಡಿದ ಮುದುಕಿ ಆಕೆಯನ್ನು ಕರೆದು ಯಾಕೆ ಹೆದರುತ್ತಿದ್ದಿ ಮಗುವೇ, ನನ್ನ ಜತೆ ಇರು. ಒಂದು ವೇಳೆ ನೀನು ಎಲ್ಲಾ ವಸ್ತುಗಳನ್ನು ಕ್ರಮವಾಗಿ ಜೋಡಿಸಿಟ್ಟರೆ ನಿನ್ನ ಜತೆ ಎಲ್ಲವೂ ಸರಿಯಾಗುವುದು. ಆದರೆ ನೀನು ನನ್ನ ಹಾಸಿಗೆಯನ್ನು ಸರಿಯಾಗಿ ಅಲ್ಲಾಡಿಸಿ ಅದರ ಗರಿಗಳು ಭೂಮಿ ಮೇಲೆ ಬೀಳುವಂತೆ ಮಾಡಬೇಕು. ನಾನು ಮುದಿ ಹಿಮ ತಾಯಿ ಎಂದು ಹೇಳುತ್ತಾಳೆ.

ಅಷ್ಟು ಚೆನ್ನಾಗಿ ಮಾತನಾಡಿದ್ದನ್ನು ಕಂಡ ಸುಂದರ ಕುಮಾರಿ ಅವಳ ಚಾಕರಿ ಮಾಡಲು ಒಪ್ಪಿಗೆ ಸೂಚಿಸಿದಳು. ಕುಮಾರಿ ದಿನನಿತ್ಯ ಹಾಸಿಗೆಯನ್ನು ಚೆನ್ನಾಗಿ ಅಲ್ಲಾಡಿಸಿದ ಕಾರಣ ಗರಿಗಳು ಹಿಮಗಳ ಹಾಗೆ ಕೆಳಗೆ ಬೀಳುತ್ತಿತ್ತು.

ಆದರೆ ಇದ್ದಕ್ಕಿದ್ದಂತೆ ಅವಳಿಗೆ ತನ್ನ ಮನೆಯ ನೆನಪಾಗಿ ತನ್ನ ಮನೆಗೆ ಹೋಗುವ ಇಚ್ಚೆಯನ್ನು ವ್ಯಕ್ತಪಡಿಸಿದಳು. ಆಗ ಮುದುಕಿ ನನಗೆ ಗೊತ್ತಿದೆ ನಿನಗೆ ಮನೆಯ ನೆನಪಾಗುತ್ತದೆ ಎಂದು. ನೀನು ಉತ್ತಮವಾಗಿ ಚಾಕರಿ ಮಾಡಿದ್ದಿ ಹಾಗಾಗಿ ನಾನು ನಿನ್ನನ್ನು ಮೇಲೆವರೆಗೆ ಬಿಟ್ಟು ಬಿಡುತ್ತೇನೆ ಎಂದು ಪ್ರತಿಕ್ರಿಯಿಸಿದಳು. ಹಾಗೆ ಹೇಳಿ ಕುಮಾರಿಯನ್ನು ಮಹಾ ದ್ವಾರದ ಕಡೆಗೆ ಕರೆದೊಯ್ದಳು.

ಆ ಮಹಾದ್ವಾರದ ಅಡಿ ಬಂದಾಗ ಚಿನ್ನದ ಮಳೆ ಅವಳ ಮೇಲೆ ಬೀಳಲು ಪ್ರಾರಂಭವಾಯಿತು. ಇದರಿಂದ ಅವಳು ಚಿನ್ನದಿಂದ ಮುಚ್ಚಿಹೋದಳು. ನಿನ್ನ ಉದ್ಯೋಗಶೀಲತೆಗಾಗಿ ನೀನು ಇದನ್ನು ಹೊಂದಲೇ ಬೇಕು ಎಂದು ಹೇಳಿ ಮುದಿ ಮಹಿಳೆ ಆ ಕಡರವನ್ನು ಕುಮಾರಿಗೆ ಕೊಡುತ್ತದೆ. ನಂತರ ಬಾಗಿಲು ಮುಚ್ಚುತ್ತದೆ. ಅವಳು ಮನೆಯ ಹತ್ತಿರ ಬಂದಾಗ ಹುಂಜ ನಮ್ಮ ಚಿನ್ನದ ಕುಮಾರಿ ಮತ್ತೆ ಮನೆಗೆ ಬಂದಳು ಎಂದು ಕೂಗಾಡುತ್ತದೆ.

ಸುಂದರ ಕುಮಾರಿ ಶ್ರೀಮಂತವಾದ ಕಥೆಯನ್ನು ಕೇಳಿದ ಮಲತಾಯಿ ನನ್ನ ಕುರೂಪಿ ಮಗಳೂ ತನ್ನ ಅದೃಷ್ಟವನ್ನು ಪರೀಕ್ಷಿಸ ಬೇಕು ಎಂಬ ಇಚ್ಚೆ ವ್ಯಕ್ತ ಪಡಿಸುತ್ತಾಳೆ. ಅದಕ್ಕಾಗಿ ಆಲಸಿ ಮಗಳು ಭಾವಿ ಸಮೀಪ ಹೋಗಿ ನೂಲನ್ನು ಹೊಸೆಯಲು ಪ್ರಾರಂಭಿಸುತ್ತಾಳೆ. ಕಡರ ರಕ್ತಮಯವಾಗುವಂತೆ ತನ್ನ ಕೈಯನ್ನು ಮುಳ್ಳಿಗೆ ತಾಕಿಸುತ್ತಾಳೆ ಮತ್ತು ಕಡರವನ್ನು ಭಾವಿಗೆ ಬಿಸಾಕುತ್ತಾಳೆ. ನಂತರ ಬಾವಿಗೆ ಹಾರುತ್ತಾಳೆ.
ನಂತರ ತನ್ನ ಸಹೋದರಿಯ ಹಾಗೆ ಸುಂದರ ಹುಲ್ಲುಗಾವಲಿನ ಪ್ರದೇಶಕ್ಕೆ ಬರುತ್ತಾಳೆ ಮತ್ತು ಅದೇ ದಾರಿಯನ್ನು ಹಿಡಿಯುತ್ತಾಳೆ.

ಅವಳು ಬೇಕರಿಯನ್ನು ಸಮೀಪಿಸಿದಾಗ ಬ್ರೆಡ್ ಅದೇ ರೀತಿ ನನ್ನನ್ನು ಎಳೆಯಿರಿ ನಾನು ಹೊತ್ತಿಹೋಗುತ್ತೇನೆ. ನಾನು ಈಗಾಗಲೇ ಕಾದಿದ್ದೇನೆ ಎಂದು ಬೊಬ್ಬಿಡುತ್ತಿತ್ತು. ಇದಕ್ಕೆ ಆಲಸಿ ಮಗಳು ನಿನ್ನನ್ನು ಎಳೆದು ನಾನು ಏಕೆ ನನ್ನ ಕೈಯನ್ನು ಕೊಳಕು ಮಾಡಬೇಕು ಎಂದು ಉತ್ತರಿಸಿ ಸೇಬಿನ ಮರದ ಹತ್ತಿರ ಹೋಗುತ್ತಾಳೆ.

ಸೇಬಿನ ಮರ ನನ್ನನ್ನು ಅಲ್ಲಾಡಿಸಿ ನಾನು ಬೆಳೆದಿದ್ದೇನೆ ಎಂದು ಕರೆಯಲು ಶುರುಹಚ್ಚಿತು ಅದಕ್ಕೆ ಆಲಸಿ ಮಗಳು, ಒಂದು ವೇಳೆ ನನ್ನ ತಲೆಗೆ ಬಿದ್ದರೆ ಎಂದು ಹೇಳಿ ಅದನ್ನು ನಿರಾಕರಿಸಿ ಎದುರು ಮುನ್ನಡೆಯುತ್ತಾಳೆ. ನಂತರ ಆಲಸಿ ಮಗಳು ಮುದಿ ಹಿಮ ತಾಯಿಯನ್ನು ಎದುರಾಗುತ್ತಾಳೆ. ಆದರೆ ಮುಂಚೆಯೇ ತಿಳಿದಿದ್ದ ಕಾರಣ ಅವಳ ಉದ್ದನೆಯ ಹಲ್ಲುಗಳನ್ನು ನೋಡಿ ಭಯಬೀಳಲಿಲ್ಲ.

ನಂತರ ಮುದುಕಿಯ ಚಾಕರಿ ಮಾಡಲು ಶುರುಹಚ್ಚಿದಳು. ಮೊದಲ ದಿನ ಚಿನ್ನದ ಮಳೆಯ ಹಂಬಲದಿಂದ ಬಹಳ ಕ್ರೀಯಾಶೀಲಳಾಗಿ ಕೆಲಸ ಮಾಡಿದಳು. 2ನೇ ದಿನ ಆಲಸಿ ತೋರಿಸಲು ಪ್ರಾರಂಭಿಸಿದಳು. 3ನೇ ದಿನ ಇನ್ನೂ ಹೆಚ್ಚಿಗೆ ಆಲಸಿ ತೋರಿಸಿದಳು. ಮುದುಕಿ ಹೇಳಿದಂತೆ ಅವಳ ಹಾಸಿಗೆಯನ್ನು ಚೆನ್ನಾಗಿ ಅಲ್ಲಾಡಿಸಲಿಲ್ಲ. ಗರಿಗಳು ಹಾರಲೂ ಇಲ್ಲ. ಇದರಿಂದಾಗಿ ಅವಳನ್ನು ಮುದುಕಿ ಕೆಲಸದಿಂದ ತೆಗೆದು ಹಾಕಿದಳು.

ನಂತರ ಆಲಸಿ ಮಹಿಳೆಯನ್ನು ದ್ವಾರದ ಹತ್ತಿರ ಕೊಂಡೊಯ್ಯಲಾಯಿತು. ದ್ವಾರದ ಅಡಿ ಹತ್ತಿರ ಬಂದಂತೆ ಅವಳ ತಲೆ ಮೇಲೆ ರಾಡಿಯ ಮಳೆ ಬೀಳಲು ಪ್ರಾರಂಭವಾಯಿತು. ಇದು ನಿನ್ನ ವೇತನ ಎಂದು ಹೇಳಿ ಮುದಿ ಹಿಮ ತಾಯಿ ಬಾಗಿಲನ್ನು ಮುಚ್ಚುತ್ತಾಳೆ.

ಆಲಸಿ ಮಗಳು ಮನೆಯ ಹತ್ತಿರ ಬಂದ ಕೂಡಲೇ ಹುಂಜ, ನಮ್ಮ ಕೊಳಕು ಕುಮಾರಿ ಮನೆಗೆ ಮತ್ತೊಮ್ಮೆ ಬಂದಳು ಎಂದು ಕೂಗಾಡಲು ಪ್ರಾರಂಭಿಸಿತು.
ಆ ರಾಡಿ ಅವಳನ್ನು ಅಂಟಿಕೊಂಡಿತ್ತು ಮತ್ತು ಅವಳು ಜೀವನ ಪರ್ಯಂತ ಅದರಿಂದ ಹೊರಗೆ ಬರಲೇ ಇಲ್ಲ.

ವೆಬ್ದುನಿಯಾವನ್ನು ಓದಿ