ಒಂದು ಊರಿನಲ್ಲಿ ಮುದಿ ಆಡು ಇತ್ತು. ಆ ಮುದಿ ಆಡಿಗೆ 7 ಸಣ್ಣ ಮರಿಗಳಿದ್ದವು .
ಒಂದು ದಿನ ತಾಯಿ ಆಡು ಆಹಾರಕ್ಕಾಗಿ ಕಾಡಿಗೆ ಹೋಗುವ ಪರಿಸ್ಥಿತಿ ಒದಗಿ ಬಂತು. ಆಗ ತಾಯಿ ಆಡು ತನ್ನ 7 ಮಕ್ಕಳನ್ನು ಕರೆದು, ಮಕ್ಕಳೇ, ನಾನು ಕಾಡಿಗೆ ಹೋಗಲೇ ಬೇಕು. ಹಾಗಾಗಿ ನೀವು ಕಪಟ ನರಿ ಬಗ್ಗೆ ಬಹಳ ಜಾಗೃತರಾಗಿರಿ, ಅದು ಯಾವ ಹೊತ್ತ ಬರಬಹುದು. ಬಂದರೆ ನಿಮ್ಮನ್ನೆಲ್ಲಾ ತಿನ್ನುತ್ತಾನೆ. ನರಿ ಯಾವಗಲೂ ವೇಷಮರೆಸಿ ನಿಮ್ಮನ್ನು ಮೋಸ ಮಾಡಬಹುದು. ಆದರೆ ಅದರ ಒರಟು ಶಬ್ದ, ಕರಿ ಪಾದದಿಂದ ನಿಮಗೆ ಅದು ನರಿ ಎಂದು ತಿಳಿಯ ಬಹುದು ಎಂದು ಎಚ್ಚರಿಕೆ ಕೊಟ್ಟಿತು.
ಮರಿ ಆಡುಗಳು, ಅಮ್ಮ ನೀವು ಹೆದರಬೇಡಿ. ನಾವು ಜಾಗೃತೆಯಿಂದ ಇರುತ್ತೇವೆ ನೀವು ನಿರ್ಭಯವಾಗಿ ಕಾಡಿಗೆ ಹೋಗಿ ಎಂದು ತಾಯಿಗೆ ಧೈರ್ಯ ತುಂಬಿದವು. ಸ್ವಲ್ಪ ಹೊತ್ತಿನ ನಂತರ ಯಾರೋ ಬಾಗಿಲು ಬಡಿಯುತ್ತಾ ಬಾಗಿಲು ತೆರೆಯಿರಿ ಮಕ್ಕಳೇ ನಾನು ನಿಮ್ಮ ತಾಯಿ ಎಂದು ಹೇಳಿತು. ಆದರೆ ಮರಿ ಆಡುಗಳು ಒರಟು ದ್ವನಿಯನ್ನು ಕೇಳಿ ಇದು ಕಪಟ ನರಿ ಎಂದು ಪತ್ತೆ ಹಚ್ಚಿತು. ನಾವು ಬಾಗಿಲು ತೆರೆಯುದಿಲ್ಲ ನಮಗೆ ನೀನು ನರಿ ಎಂದು ತಿಳಿದಿದೆ ನಿನ್ನ ಒರಡು ದ್ವನಿಯಿಂದ ಅದು ಗೊತ್ತಾಯಿತು ಎಂದು ಹೇಳಿದವು.
ಇದನ್ನು ಕೇಳಿದ ನರಿ ಅಂಗಡಿಗೆ ಓಡಿ ದ್ವನಿ ಮಧುರವಾಗಲು ಒಂದು ತುಂಡು ಸುಣ್ಣವನ್ನು ಖರೀಧಿಸಿ ತಿಂದಿತು. ನಂತರ ವಾಪಾಸು ಹೋಗಿ ಬಾಗಿಲು ಬಡಿಯಲು ಪ್ರಾರಂಭಿಸಿತು. ಬಾಗಿಲು ತೆರಯಿರಿ ಮಕ್ಕಳೇ ಇದು ನಿಮ್ಮ ತಾಯಿ ಎಂದು ಹೇಳಿತು. ಆದರೆ ನರಿಯ ಕರಿ ಪಾದವನ್ನು ಕಂಡ ಮರಿ ಆಡು ನೀನು ನಮ್ಮ ತಾಯಿಯಲ್ಲಿ ನೀನು ನರಿ ನಿನ್ನ ಕರಿ ಪಾದದಿಂದ ನಮಗೆ ತಿಳಿಯಿತು ಎಂದು ಹೇಳಿದವು.
ನಂತರ ನರಿ ಬೇಕರಿ ಅಂಗಡಿಗೆ ಹೋಗಿ ನನ್ನ ಪಾದಕ್ಕೆ ತುರುಚಿದ ಗಾಯವಾಗಿದೆ ಸ್ವಲ್ಪ ಅದಕ್ಕೆ ಹಿಟ್ಟನ್ನು ಹಾಕು ಎಂದು ಹೇಳಿತು. ಬೇಕರಿಯವ ಆ ರೀತಿ ಮಾಡಿದ. ನಂತರ ನರಿ ಓಡಿ ಗಿರಣಿಗಾರನ ಸಮೀಪ ಹೋಗಿ ನನ್ನ ಪಾದಗಳಿಗೆ ಬಿಳಿ ದ್ರವವನ್ನು ಹಾಕು ಎಂದು ಹೇಳಿತು. ನರಿ ಯಾರಿಗೋ ಮೋಸ ಮಾಡಲು ಹೀಗೆ ಹೇಳುತ್ತಿದೆ ಎಂದು ಅರಿತ ಗಿರಾಣಿಗಾರ ಅದು ಹೇಳಿದಂತೆ ಮಾಡಲು ಹಿಂಜರಿದ. ಆಗ ನರಿ ಒಂದು ವೇಳೆ ನೀನು ಹಾಗೆ ಮಾಡದಿದ್ದರೆ ನಾನು ನಿನ್ನನ್ನು ತಿನ್ನುತ್ತೇನೆ ಎಂದು ಗದರಿಸಿತು. ಆತ ಹೆದರಿಕೆಯಿಂದ ನರಿಯ ಪಾದವನ್ನು ಬಿಳಿ ಮಾಡಿದ.
ಮೂರನೇ ಭಾರಿಗೆ ಆಡಿನ ಮನೆಗೆ ಹೋದ ಕಪಟ ನರಿ, ಬಾಗಿಲು ಬಡಿಯುತ್ತಾ, ಬಾಗಿಲು ತೆರೆಯಿರಿ ಮಕ್ಕಳೇ ನಾನು ನಿಮ್ಮ ತಾಯಿ ಎಂದು ಹೇಳಿತು. ಆಗ ಮರಿ ಆಡುಗಳು ನೀನು ನಿನ್ನ ಪಾದಗಳನ್ನು ತೋರಿಸು. ಅದರಿಂದ ನಮಗೆ ನೀನು ನಮ್ಮ ತಾಯಿಯೇ ಎಂದು ಗೊತ್ತಾಗುತ್ತದೆ ಎಂದು ಹೇಳಿತು. ನಂತರ ನರಿ ತನ್ನ ಪಾದವನ್ನು ತೋರಿಸಿತು. ಬಿಳಿ ಪಾದವನ್ನು ಕಂಡ ಮರಿ ಆಡುಗಳು ಇದು ನಮ್ಮ ತಾಯಿ ಎಂದು ಎಣಿಸಿ ಬಾಗಿಲು ತೆರೆದವು. ಆದರೆ ಬಾಗಿಲು ತೆರೆದಾಗ ತಾವು ಮೋಸ ಹೋದದ್ದು ಮರಿಗಳಿಗೆ ಅರಿವಾಯಿತು.
ನರಿಯನ್ನು ನೋಡಿದ ಕೂಡಲೇ ಮರಿಗಳು ಒಂದೊಂದು ಮೂಲೆಗೆ ಹೋಗಿ ಅಡಗಿ ಕುಳಿತವು. ಆದರೆ ನರಿ ಅವುಗಳನ್ನು ಪತ್ತೆಹಚ್ಚಿ ಒಂದೊಂದಾಗಿ ಹಿಡಿದು, ನುಂಗಿತು. ಆದರೆ ಒಂದು ಮರಿಯನ್ನು ಹುಡುಕಲು ಸಾದ್ಯವಾಗಸಲಿಲ್ಲ. ತನ್ನ ಹುಟ್ಟೆ ತುಂಬಿದೆ ಎಂದು ಅರಿವಾದ ನಂತರ ನರಿ ಹುಲ್ಲುಗಾವಲಿನ ಪ್ರದೇಶಕ್ಕೆ ಹೋಗಿ ನಿದ್ರೆಗೆ ಜಾರಿತು.
ಈ ಕಡೆ ತಾಯಿ ಆಡು ಕಾಡಿನಿಂದ ವಪಾಸು ಬಂದಾಗ ಮನೆಯ ಬಾಗಿಲು ತೆರೆದಿದ್ದನ್ನು ಕಂಡು ಹೆದರಿ ಬಿದ್ದಿತು. ಒಳಗೆ ಹೋಗಿ ನೋಡಿದಾಗ ಮನೆಯ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದನ್ನು ಕಂಡು ಗಾಬರಿ ಗೊಂಡಳು. ಒಂದೊಂದಾಗಿ ತನ್ನ ಮರಿಗಳ ಹೆಸರನ್ನು ಕರೆಯಲು ಪ್ರಾರಂಭಿಸಿದಳು ಆದರೆ ಯಾವುದೇ ಪ್ರತಿಕ್ರಿಯೆ ಇಲ್ಲ. ಕೊನೆ ಮರಿಯ ಹೆಸರು ಕರೆದಾಗ ಅದು ಹೆದರಿಕೆಯಿಂದ ಓ ಗುಟ್ಟಿತು. ನಂತರ ಅದನ್ನು ಹೊರತೆಗೆದ ತಾಯಿ ತನ್ನ ಆಡು ಮರಿಗಳನ್ನು ನರಿ ತಿಂದ ವಿಷಯವನ್ನು ವಿವರವಾಗಿ ತಿಳಿದುಕೊಂಡಳು.
ದುಖಃದಿಂದ ತಾಯಿ ಆಡು ವೇಗದಿಂದ ಹುಲ್ಲುಗಾವಲಿನತ್ತ ಓಡಿತು. ಅಲ್ಲಿ ನರಿ ಮರದ ಕೆಳಗೆ ಆರಾಮದಿಂದ ಮಲಗಿದ್ದನ್ನು ಕಂಡಿತು. ಎಚ್ಚರಿಕೆಯಿಂದ ಅದರ ಹತ್ತಿರ ಹೋಗಿ ಅದನ್ನು ಸರಿಯಾಗಿ ಪರೀಕ್ಷಿಸಿತು. ಹೀಗೆ ಪರಿಕ್ಷಿಸುತ್ತಿರುವಾಗ ಅದರ ತುಂಬಿದ ಹೊಟ್ಟೆಯಿಂದ ಚಲನೆ ಯಾಗುವುದು ಕಂಡು ಬಂತು. ನನ್ನ ಮರಿಗಳನ್ನು ನುಂಗಿದ ನರಿಯ ಹೊಟ್ಟೆಯಲ್ಲಿ ಅವುಗಳು ಇನ್ನೂ ಜೀವಂತವಿದೆ ಎಂದು ತಾಯಿ ಆಡು ಯೋಚಿಸಿತು.
ಕೂಡಲೇ ತನ್ನ ಕೊನೆಯ ಮರಿ ಆಡಿಗೆ ಮನೆಯಿಂದ ಚೂರಿ ತರಲು ಹೇಳಿತು. ಮರಿ ಆಡು ವೇಗವಾಗಿ ಮನೆಗೆ ಹೋಗಿ ಚೂರಿ ತೆಗೆದುಕೊಂಡು ತಾಯಿಗೆ ಕೊಟ್ಟಿತು. ತಾಯಿ ಆಡು ನಿದಾನವಾಗಿ ಮಲಗಿದ್ದ ನರಿ ಹತ್ತಿರ ಹೋಗಿ ಅದರ ಹೊಟ್ಟೆಯನ್ನು ಜಾಗರೂಕತೆಯಿಂದ ಸೀಳಿತು. ಹಾಗೆ ಸೀಳಿದ ಕೂಡಲೇ ಒಳಗಿದ್ದ ಇತರ ಆಡು ಮರಿಗಳು ಒಂದೊಂದಾಗಿ ಹೊರಕ್ಕೆ ಹಾರಿತು. ಎಲ್ಲಾ ಮರಿಗಳು ಸುರಕ್ಷಿತವಾಗಿದ್ದವು. ಯಾವುದೇ ಗಾಯ ಆಗಿರಲಿಲ್ಲ.
ನಂತರ ತಾಯಿ ಆಡು, ಮರಿ ಆಡಿಗೆ ಕೆಲವು ದೊಡ್ಡ ಕಲ್ಲುಗಳನ್ನು ತರಲು ಹೇಳಿತು. ಮರಿ ಆಡುಗಳು ಕಲ್ಲುಗಳನ್ನು ತಂದು ತಾಯಿಗೆ ಕೊಟ್ಟವು. ತಾಯಿ ಆಡು ಆ ಕಲ್ಲುಗಳನ್ನು ನರಿಯ ಹೊಟ್ಟೆಯೊಳಗೆ ಹಾಕಿ ಸೀಳಿದ್ದ ಹೊಟ್ಟೆಯನ್ನು ವೇಗವಾಗಿ ಹೊಲಿಯುತ್ತದೆ. ನಂತರ ತಾಯಿ ಆಡು ತನ್ನ ಮರಿಗಳನ್ನು ಕೆರೆದುಕೊಂಡು ತನ್ನ ಮನೆಗೆ ಹೋಗುತ್ತದೆ.
ಈ ಕಡೆ ನರಿ ನಿದ್ದೆಯಿಂದ ಏಳುತ್ತದೆ ಮತ್ತು ಬಾರಿ ಬಾಯರಿಕೆ ಎಣಿಸಿ ನೀರು ಕುಡಿಯಲು ಬಾವಿಯತ್ತ ಹೋಗುತ್ತದೆ. ಆದರೆ ಹೋಗುತ್ತಿರುವಾಗ ಅದರ ಹೊಟ್ಟೆಯೊಳಗಿದ್ದ ಕಲ್ಲುಗಳು ಒಂದಕ್ಕೊಂದು ತಾಕಲು ಪ್ರಾರಂಭಿಸಿದವು ಮತ್ತು ಹೊಟ್ಟೆಗೆ ಜೋರಾಗಿ ಕುಟ್ಟುತ್ತಾ ಇತ್ತು. ಆಗ ನರಿ, ನನ್ನ ಹೊಟ್ಟೆಯಲ್ಲಿ ಅಲ್ಲಾಡುತ್ತಿರುವುದು, ಜಿಗಿಯುತ್ತಿರುವುದು ಏನು?. ನಾನು ಇದು 6 ಸಣ್ಣ ಆಡಿನ ಮರಿಗಳು ಎಂದು ಎಣಿಸಿದ್ದೆ ಆದರೆ ಈಗ ಇದು ಕಲ್ಲುಬಂಡೆಗಿಂತಲೂ ಭಾರವಾಗಿದೆಯಲ್ಲಾ ಎಂದು ಕಿರುಚಾಡಲು ಪ್ರಾರಂಭಿಸುತ್ತದೆ.
ನರಿ ಪ್ರಾಯಸದಿಂದ ಭಾವಿ ಸಮೀಪ ಬಂದು, ನೀರು ಕುಡಿಯಲೆಂದು ಬಾಗಿದಾಗ, ಅದರ ಹೊಟ್ಟೆಯಲ್ಲಿನ ಕಲ್ಲುಗಳು ಹೆಚ್ಚು ಬಾರ ಇದ್ದ ಕಾರಣ ಅದು ಆಯ ತಪ್ಪಿ ಆಳದ ಬಾವಿಯೊಳಗೆ ಬಿದ್ದು ತನ್ನ ಪ್ರಾಣ ಕಳೆದು ಕೊಂಡಿತು.ಇದನ್ನು ನೋಡಿದ 7 ಆಡು ಮರಿಗಳು ಖುಷಿಯಿಂದ ಕುಣಿಯುತ್ತಾ ಕಪಟ ನರಿ ಸತ್ತುಹೋಯಿತು ಎಂದು ಜೋರಾಗಿ ಕಿರುಚಾಡಲು ಶುರುಹಚ್ಚಿದವು. ನಂತರ ಈ 7 ಆಡು ಮರಿಗಳು ತನ್ನ ತಾಯಿಯೊಂದಿಗೆ ನಿರ್ಭಯದಿಂದ ಜೀವಿಸುತ್ತಿತ್ತು.