ಪಂಚತಂತ್ರದ ಕಥೆಗಳು

ಮಕ್ಕಳಿಗೆ ಕಥೆಗಳೆಂದರೆ ಇಷ್ಟ. ಹಿಂದೆಲ್ಲಾ ಅವಿಭಕ್ತ ಕುಟುಂಬಗಳು ಇದ್ದ ಕಾಲದಲ್ಲಿ ಮಕ್ಕಳಿಗೆ ಹಿರಿಯರು, ತಾತ-ಅಜ್ಜಿಯರ ಒಡನಾಟ, ಕಥೆಕೇಳುವ ಹವ್ಯಾಸವಿರುತ್ತಿತ್ತು. ಆದರೆ ಇಂದು ಹೆತ್ತವರು ಮಕ್ಕಳು ಮಾತ್ರ ಇರುವ ಸಣ್ಣಕುಟುಂಬಗಳಾದ್ದರಿಂದ ಮಕ್ಕಳಲ್ಲಿ ಕಥೆಕೇಳಿ ಬೆಳೆಯುವ ಪ್ರವೃತ್ತಿ ಕುಸಿಯುತ್ತಿದೆ.

ಮಕ್ಕಳು ಕೇಳಲೇ ಬೇಕಾದ ಅಥವಾ ಓದಲೇ ಬೇಕಾದ ಕಥೆಗಳಲ್ಲಿ ಪಂಚತಂತ್ರದ ಕಥೆಗಳು ಪ್ರಮುಖವಾದವುಗಳು. ಬಹಳ ಹಿಂದೆ ಅರಸನೊಬ್ಬನಿಗೆ ನಾಲ್ಕು ಮಂದಿ ಮಕ್ಕಳಿದ್ದರು. ಕ್ಷಾತ್ರವಿದ್ಯೆ, ವೇದಆಗಮಗಳಲ್ಲಿ ಪರಿಣತಿ ಗಳಿಸಬೇಕಾದ ಅವರು ಯಾವುದೇ ವಿದ್ಯೆ ಕಲಿಯದೆ ಪುಂಡಪೋಕರಿಗಳಾಗಿ ಬೆಳೆಯತೊಡಗಿದರು.

ಮಕ್ಕಳಿಗೆ ವಿದ್ಯೆ ಕಲಿಸಬೇಕೆಂಬ ಅರಸನ ಪ್ರಯತ್ನವೆಲ್ಲವೂವಿಫಲವಾಯಿತು. ಈ ಹಂತದಲ್ಲಿ ರಾಜನಿಗೆ ಮಕ್ಕಳ ಭವಿಷ್ಯದ ಚಿಂತೆ, ರಾಜ್ಯದ ಉತ್ತರಾಧಿಕಾರಿಗಳ ಚಿಂತೆ ಕಾಡತೊಡಗಿತು. ಈ ಹಂತದಲ್ಲಿ ಆತನಿಗೆ ವಿಷ್ಣು ಶರ್ಮ ಎಂಬ ಸನ್ಯಾಸಿಯ ಪರಿಚಯವಾಯಿತು. ಸನ್ಯಾಸಿಯು ಮಕ್ಕಳ ವಿದ್ಯಾಭ್ಯಾಸದ ಹೊರೆ ಹೊರಲು ಸಿದ್ಧನಾದನು.

ರಾಜಕುಮಾರರು ಯಾವುದೇ ವಿದ್ಯೆ ಕಲಿಯಲು ಒಪ್ಪದಿರುವುದರಿಂದ ಆದರೆ ಕಥೆ ಕೇಳುವುದರಲ್ಲಿ ಉತ್ಸುಕರಾಗಿದ್ದುದರಿಂದ ಸನ್ಯಾಸಿಯು ಕಲಿಸಬೇಕಾದ ರಾಜವಿದ್ಯೆಯನ್ನು ಕಥೆಗಳ ರೂಪದಲ್ಲಿ ಹೆಣೆದು ಮಕ್ಕಳಿಗೆ ಮನದಟ್ಟು ಮಾಡುತ್ತಿದ್ದನು. ಈ ಕಥೆಗಳೇ ಪಂಚತಂತ್ರದ ಕಥೆಗಳು ಎಂದು ಹೆಸರು ಪಡೆದುವು.

ಪಂಚತಂತ್ರದ ಕಥೆಗಳಲ್ಲಿ- ಮಿತ್ರಲಾಭ, ಮಿತ್ರಬೇಧ, ಕಾಕೋಕೋಲೂಕಿಯಾ ಮುಂತಾದ ಐದು ವಿಭಾಗಗಳಲ್ಲಿ ಜನರೊಡನೆ ವ್ಯವಹರಿಸುವ ಅಥವಾ ಯಶಸ್ವಿ ಆಡಳಿತ ನಡೆಸುವ ವಿಧಾನವಿದೆ. ಆದರೆ ಇದು ಪ್ರಾಣಿ ಪ್ರಪಂಚದೊಂದಿಗೆ ಬೆಸೆದ ಕಥೆಯಾದ್ದರಿಂದ ಮಕ್ಕಳು ಖುಷಿ ಪಟ್ಟರು. ರಾಜಪುತ್ರರು ಅವರಿಗರಿವಿಲ್ಲದೆಯೇ ಕಥೆಯ ರೂಪದಲ್ಲಿ ವಿದ್ಯೆಕಲಿಯತೊಡಗಿದರು.

ವೆಬ್ದುನಿಯಾವನ್ನು ಓದಿ