ಜಮೀರ್ ಅಹ್ಮದ್ ಖಾನ್ ಒಬ್ಬ ಹುಚ್ಚ - MPR
ಸಚಿವ ಜಮೀರ್ ಅಹ್ಮದ್ ಖಾನ್ ಒಬ್ಬ ಹುಚ್ಚ.. ಆತ ಹುಚ್ಚನಂತೆ ಮಾತನಾಡುತ್ತಾನೆ ಎಂದು ದಾವಣಗೆರೆ ಜಿಲ್ಲೆಯ ಸವಳಂಗ ಗ್ರಾಮದಲ್ಲಿ ಮಾಜಿ ಸಚಿವ M.P.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಪುಲ್ವಾಮ ಘಟನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನ ಬ್ರಿಟಿಷರಿಗೆ ಹೋಲಿಕೆ ಮಾಡುವ ಶಾಸಕ ಬಾಲಕೃಷ್ಣಗೆ ನಾಚಿಕೆ ಆಗಬೇಕು.. ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ ಅಂತಾರೆ.. ಕೆಲ ಶಾಸಕರು ಇಂಥವರೇ ಸಿಎಂ ಆಗಬೇಕೆಂದು ಹೇಳುತ್ತಿದ್ದಾರೆ.. ಸ್ವಯಂ ಅಪರಾಧದಿಂದ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ.. ಆಡಳಿತ ವೈಫಲ್ಯದಿಂದ ಕಾಂಗ್ರೆಸ್ ಶಾಸಕರೇ ರಾಜೀನಾಮೆ ನೀಡುತ್ತಾರೆ.. ಬಿಜೆಪಿ ಆಪರೇಷನ್ ಮಾಡಲ್ಲ, ಕಾಂಗ್ರೆಸ್ ಶಾಸಕರೇ ಬೇಸತ್ತು ರಾಜೀನಾಮೆ ನೀಡುತ್ತಾರೆ ಎಂದು ಹೇಳಿದ್ರು.