೨೦೨೪ರ ಸಮರಕ್ಕೆ ಮೈತ್ರಿ ಪಡೆಯ ಮುಂದಿರುವ ಅಸ್ತ್ರಗಳು ಅವೇನಾ....?

ಮಂಗಳವಾರ, 28 ನವೆಂಬರ್ 2023 (15:20 IST)
ಡೆಲ್ಲಿಯಿಂದಲೆ ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ನಡುವೆ ಮೈತ್ರಿ ಆಗಿದೆ ಅನ್ನೋದಕ್ಕೆ ಸ್ಪಷ್ಟತೆ ಸಿಕ್ಕಿತ್ತು.... ಆದರೆ ಮೈತ್ರಿ ಏನೋ ಆಗಿದೆ, ಮುಖ್ಯವಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಕಟ್ಟಿ ಹಾಕಲು ಮೈತ್ರಿ ಪಡೆಯೂ ಅಗತ್ಯವಾಗಿ ಒಂದಷ್ಟು ಕಾರ್ಯತಂತ್ರಗಳ ಮೊರೆ ಹೋಗಬೇಕಾದ ಅನಿವರ‍್ಯತೆ ಇದೆ.
 
ಯೆಸ್... ವಿಜಯೇಂದ್ರ ಮತ್ತು ಜೆಡಿಎಸ್‌ನ ಕುಮಾರಸ್ವಾಮಿ ಸಿದ್ದು ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಷ್ಟು ಲೋಪಗಳನ್ನು ಅನಾಯಾಸವಾಗಿ ಎತ್ತಿ ತೋರಿಸಬಹುದು.. ಐದು ಗ್ಯಾರಂಟಿಗಳಲ್ಲಿ ಈಗಾಗಲೇ ನಾಲ್ಕು ಜಾರಿಯಲ್ಲಿದ್ದರೂ, ಗೃಹಲಕ್ಷಿ÷ಕಥೆ ಏನಾಗಿದೆ ಎಷ್ಟು ಹೆಂಗಸರ ಅಕೌಂಟಿಗೆ ಹಣ ಬಿದ್ದಿದೆ ಅನ್ನೋದರ ಸ್ಪಷ್ಟತೆ ಇಲ್ಲ. ಇನ್ನೂ ಅಕ್ಕಿ ಮ್ಯಾಟರ್ ಅದೇನೋ ೧೦ ಕೆಜಿ ಅಂದವರು, ಆ ನಂತರ ಅಕೌಂಟಿಗೆ ಐದು ಕೆಜಿಯ ಅಕ್ಕಿಗೆ ದುಡ್ಡು ಹಾಕ್ತೀವಿ ಅಂದರು... ಇನ್ನೂಳಿದ ಐದು ಕೆ.ಜಿ ಅಕ್ಕಿ ಗ್ಯಾರಂಟಿ ಪಕ್ಕಾನಮ್ಮ ಅಂತ ಕೊಡ್ತಾ ಹೋಗ್ತಿದ್ದಾರೆ. ಇನ್ನೊಂದು ಯುವನಿಧಿ ಗ್ಯಾರಂಟಿ ಹಾಗೆ ಪೆಂಡಿAಗ್ ಇದೆ.
 
ಇದರ ಜೊತೆಗೆ ಬರಪ್ರವಾಸ ಅಂತ ವಿಪಕ್ಷ ನಾಯಕ ಅಶೋಕ ಅಖಾಡಕ್ಕೆ ಇಳಿದಾಗಿದೆ. ಅತ್ತಾ ಜೆಡಿಎಸ್‌ನಿಂದಲೂ ಸಾಥ್ ಸಿಕ್ತಾ ಇದೆ. ಹಾಗೇ ಕಾವೇರಿ ಜಲ ವಿವಾದ ವಿಷಯದಲ್ಲಿ ರಾಜಕಾರಣ ಮಾಡಲು ಹೊರಟರೆ ಕೈ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಲಾಜಿಕ್ ಹುಡುಕಬಹುದು..?
 
ಇದರ ಜೊತೆಗೆ ವರ್ಗಾವಣೆ ದಂಧೆ, ಕೈ ತಪ್ಪಿದಂತೆ ಭಾಸವಾಗ್ತಾ ಇರುವ ಆಡಳಿತ, ಸಿದ್ದು ಪುತ್ರನಾ ಹಲೋ ಅಪ್ಪ ಸಂಭಾಷಣೆ ಇದರ ಜೊತೆಗೆ ಅಭಿವೃದ್ದಿ ಯೋಜನೆಗಳ ಹಿನ್ನಡೆ. ಹೀಗೆ ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ಮೈನಸ್‌ಗಳನ್ನು ದೊಡ್ಡ ಅಸ್ತçಗಳಾಗಿ ಬಳಸಿ, ಲೋಕ ಗೆಲ್ಲುವ ಅಜೆಂಡಾವನ್ನು ವಿಜಯ ಕುಮಾರ ವ್ಯೂಹ ಸಿದ್ದಪಡಿಸಬಹುದು..?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ