ಜಿಪಂ ಚುನಾವಣೆಗೆ 12 ವಾರಗಳ ಗಡುವು ನೀಡಿದ ಹೈಕೋರ್ಟ್!
ಜಿಲ್ಲಾ ಪಂಚಾಯಿತಿಗೆ 12 ವಾರಗಳಲ್ಲಿ ಚುನಾವಣೆ ನಡೆಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.
ಇತ್ತೀಚೆಗಷ್ಟೇ ಬಿಬಿಎಂಪಿ ಚುನಾವಣೆ ಸುಪ್ರೀಂಕೋರ್ಟ್ 8 ವಾರಗಳ ಗಡುವು ನೀಡಿದ ಬೆನ್ನಲ್ಲೇ ಇದೀಗ ಹೈಕೋರ್ಟ್ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಗಡುವು ವಿಧಿಸಿದೆ.
ಕ್ಷೇತ್ರ ಪುನರ್ ವಿಂಗಡಣೆ, ಮೀಸಲು ಘೋಷಣೆ ಸೇರಿದಂತೆ ರಾಜ್ಯ ಸರಕಾರ 12 ವಾರಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದೆ.
ಬಿಬಿಎಂಪಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೇ ರಾಜ್ಯ ಸರಕಾರ ಮೀನಮೇಷ ನಡೆಸುತ್ತಿದ್ದು, ಪ್ರತಿಬಾರಿಯೂ ಹೆಚ್ಚಿನ ಸಮಯವಕಾಶ ಬೇಕು ಎಂಬ ನೆಪವೊಡ್ಡಿ ಚುನಾವಣೆ ಮುಂದೂಡುತ್ತಲೇ ಬಂದಿತ್ತು.
ಇದೀಗ ರಾಜ್ಯ ಚುನಾವಣಾ ಆಯೋಗ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ಸರಕಾರ 12 ವಾರಗಳಿಗಿಂತ ಹೆಚ್ಚಿನ ಅವಕಾಶ ನೀಡಬಾರದು ಎಂದು ಮಾಡಿದ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್ ವಿಭಾಗೀಯ ಗಡುವು ವಿಧಿಸಿದೆ.