ಬೇರೆಯವರು ಮನೆಯಲ್ಲಿದ್ದರೂ ಇನ್ನೊಬ್ಬರು ಬಾಡಿಗೆದಾರರು ಎಂಬಂತೆ ಸೂಚಿಸುತ್ತಿತ್ತು. ಸಮಸ್ಯೆ ಮತ್ತು ಗೊಂದಲದ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜನವರಿ 18, 2024 ರ ಆವೃತ್ತಿಯಲ್ಲಿ 'ನಿಮ್ಮ ಮನೆಯನ್ನು ಬದಲಾಯಿಸುವುದೇ? ಗೃಹ ಜ್ಯೋತಿ ಮರು-ನೋಂದಣಿ ಸಂಕಟ' ಎಂದು ವರದಿಯನ್ನು ಮಾಡಿತ್ತು. ಹಾಗೆಯೇ ಹಲವಾರು ಮಾಧ್ಯಮಗಳು ವರದಿಯನ್ನು ಮಾಡಿತ್ತು.ಉಚಿತ ವಿದ್ಯುತ್ ಯೋಜನೆ ಗೃಹ ಜ್ಯೋತಿ ನಿಯಮ ಬದಲಾಯಿಸಿದ ಕರ್ನಾಟಕ ಸರ್ಕಾರಈಗ ಮಾಧ್ಯಮಗಳ ವರದಿಯನ್ನು ಗಮನಿಸಿರುವ ಬೆಸ್ಕಾಂ ಬಾಡಿಗೆದಾರರು ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಮ್‌ಗಳು) ನ್ಯಾಯವ್ಯಾಪ್ತಿಯ ವಿಭಾಗೀಯ ಕಚೇರಿಗಳಿಗೆ ಭೇಟಿ ನೀಡುವಂತೆ ಸೂಚಿಸಿದೆ.
ಅವರ ಗೃಹ ಜ್ಯೋತಿ ಸಂಪರ್ಕಗಳಿಂದ ತಮ್ಮ ಆಧಾರ್ ಸಂಖ್ಯೆಯನ್ನು ತಾವೇ ಡಿಲಿಂಕ್ ಮಾಡುವ ಆಯ್ಕೆಯನ್ನು ನೀಡಿದೆ. ಆದರೆ ಈ ಕ್ರಮವು ವಿಭಾಗೀಯ ಕಚೇರಿಗಳಲ್ಲಿ ಅವ್ಯವಸ್ಥೆಗೆ ಮತ್ತಷ್ಟು ದಾರಿ ಮಾಮಾಡಲಾಗುತ್ತಿದೆ.ಆನ್‌ಲೈನ್ ವಿಧಾನಗಳ ಮೂಲಕ ಗ್ರಾಹಕರನ್ನು ಡಿಲಿಂಕ್ ಮಾಡಲು ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆಗಳನ್ನು ಮಾಡಲು ಇಲಾಖೆ ಎಲ್ಲಾ ಎಸ್ಕಾಮ್‌ಗಳನ್ನು ತಿಳಿಸಿದೆ.ಈ ಯೋಜನೆಯಡಿಯಲ್ಲಿ ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠವಾಗಿ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಅನ್ನು ನೀಡಲಾಗುತ್ತದೆ. ಸರಾಸರಿ ಲೆಕ್ಕಾಚಾರದಲ್ಲಿ ನಾವು ನೋಡಿದಾಗ ಮಾಸಿಕವಾಗಿ 500ರಿಂದ 1200 ರೂಪಾಯಿ ವಿದ್ಯುತ್ ಬಿಲ್ ಬರುವವರಿಗೆ ಇದು ಲಾಭವಾಗಲಿದೆ. ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್, ಮಂಗಳೂರುಒನ್, ವಿದ್ಯುತ್ ಇಲಾಖೆ ಕಚೇರಿಗಳಲ್ಲಿ ಕೂಡ ಅರ್ಜಿಯನ್ನು ನೋಂದಣಿ ಮಾಡಲಾಗುತ್ತಿದೆ.