ಆಹಾರ ಇಲಾಖೆ ಗೋದಾಮಿನಲ್ಲಿ 1,000 ಕ್ವಿಂಟಾಲ್ ಅಕ್ಕಿ ಮಾಯ?

ಶನಿವಾರ, 14 ಜುಲೈ 2018 (19:08 IST)
ಅನ್ನ ಭಾಗ್ಯ ಅಕ್ಕಿಗೆ ಖನ್ನ ಹಾಕಿರುವ ಅಧಿಕಾರಿಗಳು, ನಂಜುಂಡೇಶ್ವರನ ಊರಲ್ಲೇ ಭಾರಿ ಗೋಲ್ ಮಾಲ್ ನಡೆದಿರುವ ಆರೋಪ ಕೇಳಿಬಂದಿದೆ. ಆಹಾರಇಲಾಖೆ ಗೋದಾಮಿನಲ್ಲಿ 1,000 ಕ್ವಿಂಟಾಲ್ ಅಕ್ಕಿ ಮಾಯವಾಗಿದೆ ಎಂದು ಹೇಳಲಾಗುತ್ತಿದೆ.

ನಂಜನಗೂಡು ಆಹಾರ ಇಲಾಖೆ ಗೋದಾಮಿನಲ್ಲಿ 1,000 ಕ್ವಿಂಟಾಲ್ ಅಕ್ಕಿ ಮಾಯವಾಗಿದೆ ಎಂಬ ಆರೋಪ ಕೇಳಿಬಂದಿದೆ. ಅನ್ನ ಭಾಗ್ಯ ಅಕ್ಕಿಗೆ ಖನ್ನಹಾಕಿರುವ ಅಧಿಕಾರಿಗಳು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ. ನಂಜುಂಡೇಶ್ವರನ ಊರಲ್ಲೇ ಭಾರಿ ಗೋಲ್ ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದೆ. ಗೋದಾಮಿಗೆ ಬೆಂಗಳೂರಿನ ಆಹಾರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ವೇಳೆ 50 ಕೆ.ಜಿತೂಕದ 2,000 ಚೀಲ ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದೆ.
.ಪಿ.ಎಂ.ಸಿ  5ನೇ ಗೋದಾಮಿನಿಂದ ಅಕ್ಕಿ ಮೂಟೆಗಳು ನಾಪತ್ತೆಯಾಗಿವೆ. ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳಾದಮರಳ ಸಿದ್ದ ಆರಾಧ್ಯರಾಘವೇಂದ್ರ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆದಿದೆ. ಗೋದಾಮು ವ್ಯವಸ್ಥಾಪಕ ಮೈಲಾರಯ್ಯನನ್ನು ತೀವ್ರ ವಿಚಾರಣೆನಡೆಸಲಾಗಿದೆ. ಸ್ಥಳದಲ್ಲಿ ಉಪ ನಿರ್ದೇಶಕ ಕಾ.ರಾಮೇಶ್ವರಪ್ಪ ಇದ್ದರೂ ಅಕ್ಕಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ