ವಕ್ಫ್ ಗೆ 1 ಲಕ್ಷ 12 ಸಾವಿರ ಎಕರೆ ದಾನ ಬಂದಿರೋದು: ಜಮಿರ್ ಅಹ್ಮದ್ ಅದೇ ರಾಗ

Sampriya

ಭಾನುವಾರ, 3 ನವೆಂಬರ್ 2024 (13:16 IST)
Photo Courtesy X
ಕಲಬುರಗಿ: ವಕ್ಫ್ ಇವತ್ತಿನದಲ್ಲ, ಸ್ವಾತಂತ್ರ್ಯಕ್ಕೂ ಮೊದಲೇ ವಕ್ಫ್‌ ಇದೆ ಎಂದು  ವಕ್ಫ್ ಸಚಿವ ಜಮೀರ್ ಅಹ್ಮದ್ ಹೇಳಿದರು.

ಕಲಬುರಗಿಯಲ್ಲಿ ಬಸವರಾಜ ಬೊಮ್ಮಾಯಿ ಮಾತುಗಳನ್ನು ಪ್ರಸ್ತಾಪಿಸಿ ಮಾತನಾಡಿದ ಜಮೀರ್ ಅಹ್ಮದ್ ಅವರು, ವಕ್ಫ್‌ ಇಂದು, ನಿನ್ನೆ ರಚನೆ ಆಗಿದ್ದಲ್ಲ. ನೂರಾರು ವರ್ಷದ ಹಿಂದೆಯಿಂದಲೂ ವರ್ಕ್ಫ್ ಇದೆ. ವಕ್ಫ್ ಬಳಿ ಇರೋದು ಸರ್ಕಾರ ಕೊಟ್ಟ ಜಮೀನಲ್ಲ. ದಾನಿಗಳು ದಾನ ಮಾಡಿರೋದು ಎಂದು ಜಮೀರ್ ಆಹ್ಮದ್ ಹೇಳಿಕೆ.

1 ಲಕ್ಷದ 12 ಸಾವಿರ ಎಕರೆ ದಾನಿಗಳು ನೀಡಿರೋದು. ಕೇಂದ್ರ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದ್ದಾರೆ. ತರಲಿ ಆಮೇಲೆ ಏನು ಮಾಡ್ಬೇಕೋ ಮಾಡ್ತೇವೆ ಎಂದರು.

ಸದ್ಯ ರಾಜ್ಯ ರಾಜಕಾರಣದಲ್ಲಿ ವಕ್ಫ್‌ ಬೋರ್ಡ್ ನೋಟಿಸ್‌ ಕೊಟ್ಟಿರುವ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕಾಂಗ್ರೆಸ್ - ಬಿಜೆಪಿ ನಡುವೆ ಈ ವಿಚಾರ ಇದೀಗ ವಾದ ಪ್ರತಿವಾದ ನಡೆಯುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೂಡ ವಕ್ಫ್‌ ರೈತರಿಗೆ ನೋಟಿಸ್ ಕೊಟ್ಟಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಮತ್ತೊಂದು ಕಡೆ ಮುಸ್ಲಿಮರ ತುಷ್ಟೀಕರಣಕ್ಕೆ ಕಾಂಗ್ರೆಸ್ ಮುಂದಾಗಿದ್ದು, ರೈತರ ಆಸ್ತಿ ಮಾತ್ರವಲ್ಲ, ದೇವಸ್ಥಾನದ ಆಸ್ತಿಗಳ ಮೇಲೂ ವಕ್ಫ್‌ ಕಣ್ಣಿಟ್ಟಿದ್ದರೂ ಸರ್ಕಾರ ಸುಮ್ಮನಿದೆ ಎಂದು ಆರೋಪಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ