ಬಿಬಿಎಂಪಿಯಲ್ಲಿ 118 ಕೋಟಿ ರೂ. ಬೋಗಸ್ ಬಿಲ್ : ದರ್ಶನಾಪೂರ

ಶುಕ್ರವಾರ, 11 ಆಗಸ್ಟ್ 2023 (09:56 IST)
ಯಾದಗಿರಿ : ಬಿಜೆಪಿ ಅವಧಿಯಲ್ಲಿ ಬಿಬಿಎಂಪಿಯಲ್ಲಿ 118 ಕೋಟಿ ರೂ. ಬೋಗಸ್ ಬಿಲ್ ಆಗಿದೆ. ಕಾಮಗಾರಿ ಮಾಡದೆ ಬಿಲ್ ಪಡೆದಿದ್ದಾರೆ. ಇದನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಕಂಡುಹಿಡಿದಿದ್ದಾರೆ ಎಂದು ಸಚಿವ ದರ್ಶನಾಪೂರ ಹೇಳಿದ್ದಾರೆ.
 
ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿ ಪೂರ್ಣಗೊಳಿಸಿದವರಿಗೆ ಬಿಲ್ ಮಾಡುವುದಕ್ಕೆ ಯಾವುದೇ ಅಡೆತಡೆ ಇಲ್ಲ. ಈಗಾಗಲೇ ಒಳ್ಳೆಯ ಕೆಲಸ ಮಾಡಿದವರು ಹೆದರುವ ಅಗತ್ಯವಿಲ್ಲ.

ಬೋಗಸ್ ಬಿಲ್ಗಳಿಗೂ ಪೇಮೆಂಟ್ ಮಾಡಬೇಕಾ? ಉಳಿದವರಿಗೆ ಬಿಲ್ ಕೊಡುವುದಿಲ್ಲ ಎಂದು ಡಿಸಿಎಂ ಹೇಳಿದ್ದಾರೆ. ಕಳಪೆ ಕಾಮಗಾರಿ ನಡೆದಿರುವುದನ್ನು ಪರಿಶೀಲಿಸಿ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಈಗಾಗಲೇ ಎಸ್ಐಟಿ ತನಿಖೆ ನಡೆಯುತ್ತಿದೆ. ತನಿಖೆ ನಡೆಯುವ ವೇಳೆ ಬಿಲ್ ಕೊಡುವುದು ಹೇಗೆ ಎಂದಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಪತ್ರ ಬರೆದು ಆತ್ಮಹತ್ಯೆ ಮಾಡ್ಕೊಂಡಿದ್ದ. ಗುತ್ತಿಗೆದಾರ ಸಂಘದ ಅದ್ಯಕ್ಷ ಗುತ್ತಿಗೆದಾರರ ಪರವಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಬಿಬಿಎಂಪಿ ಕೆಲಸ ನಡೆಯದೇ ಸಾಕಷ್ಟು ಬಿಲ್ ಪಡೆದಿದ್ದಾರೆ. ಈಗಾಗಲೇ 118 ಕೋಟಿ ಬೋಗಸ್ ಬಿಲ್ ಕಂಡು ಹಿಡಿದಿದ್ದೇವೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಿಜೆಪಿಯವರು ಒಂದೊಂದು ರೀತಿ ಹೇಳುತ್ತಿದ್ದಾರೆ. ಗ್ಯಾರಂಟಿ ಯಾವಾಗ ಜಾರಿ ಮಾಡುತ್ತೀರಿ ಎಂದಿದ್ದರು. ಈಗ ಜಾರಿಯಾಗಿದೆ ನೋಡಿ ಎಂದಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ