ಬಿಬಿಎಂಪಿ ಗುತ್ತಿಗೆದಾರರಿಂದ ಬಿಲ್ ಪಾವತಿ ಆಗದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ ರವಿ, ಬಿಲ್ ಪಾವತಿ ಮಾಡಲು ಬ್ಲ್ಯಾಕ್ಮೇಲ್ ಮಾಡ್ತಿದ್ದಾರೆ ಅನ್ನೋದು ಗಮನಕ್ಕೆ ಬಂದಿದೆ. ಪಾರದರ್ಶಕತೆ ಆಡಳಿತ ಕೊಡ್ತೀನಿ ಅಂದವರು ಧಮ್ಕಿ ಹಾಕ್ತಿದ್ದಾರೆ.
ಈಗಿನ ಬಿಲ್ ಗಳಿಗೆ ಕಮಿಷನ್ ಅಷ್ಟೇ ಅಲ್ಲ, ಕಳೆದ 5 ವರ್ಷಗಳ ಹಿಂದೆ ನಡೆದ ಕಾಮಗಾರಿಗಳ ಬಿಲ್ ಪಾವತಿಗೂ ಕಮಿಷನ್ ಕೇಳ್ತಿದ್ದಾರೆ ಎಂಬ ಮಾಹಿತಿ ಇದೆ. ಡಿಕೆಶಿ ಅವರನ್ನ ಬ್ಲ್ಯಾಕ್ಮೇಲ್ ಮಾಡಲು ಆಗಲ್ಲ. ಏಕೆಂದ್ರೆ ಅವರೇ ಬ್ಲ್ಯಾಕ್ಮೇಲ್ ಮಾಡ್ತಾರೆ. ಅವರನ್ನು ಎದುರಿಸುವ ಶಕ್ತಿ ಯಾರಿಗೂ ಇಲ್ಲ. ಅವರೇ ಎಲ್ಲರನ್ನ ಎದುರಿಸ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ಕೃಷಿ ಸಚಿವರ ವಿರುದ್ಧ ಪತ್ರ ಬರೆದಿದ್ದಾರೆ, ಅದರ ಬಗ್ಗೆ ತನಿಖೆ ನಡೆಸಿ ಅಂತಾ ಹೇಳಿದ್ದಾರೆ. ತನಿಖೆ ನಡೆಸಿ ವರದಿ ಕೊಡಬೇಕಾಗುತ್ತೆ. ಆದ್ರೆ ತನಿಖೆಗೂ ಮೊದಲೇ ನಕಲಿ ಅಂತಾ ಇವರು ಹೇಗೆ ಹೇಳ್ತಾರೆ? ಸಿಎಂ, ಚಲುವರಾಯಸ್ವಾಮಿ ತನಿಖೆ ಸಂಸ್ಥೆಗಳಾ? ಸಿಐಡಿ ತನಿಖೆಗೆ ಕೊಟ್ಟಿದ್ದಾರೆ ಈಗ, ಸಿಐಡಿ ತನಿಖೆ ವರದಿ ಕೊಡಬೇಕಲ್ಲವಾ? ಸಿಐಡಿ ತನಿಖೆಗೂ ಮೊದಲೇ ಪತ್ರ ನಕಲಿ ಅಂದ್ರೆ ನಾವು ಹೇಳಬೇಕಾಗುತ್ತೆ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳುತ್ತಾರೆ ಅಂತಾ ಎಂದು ವ್ಯಂಗ್ಯವಾಡಿದ್ದಾರೆ.