ಮನೆ ಬಾಡಿಗೆ ಕೊಡ್ತಿಲ್ಲ ಎಂದ ಸಮೀರ್ ಎಂಡಿ: ನಿಮ್ ಜೊತೆ ನಾವಿದ್ದೇವೆ ಬ್ರದರ್ ಎಂದ ವೀಕ್ಷಕರು

Krishnaveni K

ಶನಿವಾರ, 13 ಸೆಪ್ಟಂಬರ್ 2025 (09:22 IST)
ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಸದ್ದು ಮಾಡಿದ್ದು ಯೂಟ್ಯೂಬರ್ ಸಮೀರ್ ಎಂಡಿ ವಿಡಿಯೋ. ಆದರೆ ಆತನೂ ಬುರುಡೆ ಗ್ಯಾಂಗ್ ನೊಂದಿಗೆ ಸೇರಿಕೊಂಡಿದ್ದಾನೆ ಎಂದ ಮೇಲೆ ಮನೆ ಬಾಡಿಗೆ ಕೊಡ್ತಿಲ್ಲ ಎಂದು ಲೈವ್ ಬಂದು ಅಳಲು ತೋಡಿಕೊಂಡಿದ್ದಾನೆ.

ಧರ್ಮಸ್ಥಳದ ವಿರುದ್ಧ ಪಿತೂರಿ ನಡೆಸಲು ಬುರುಡೆ ಗ್ಯಾಂಗ್ ಜೊತೆ ಸೇರಿಕೊಂಡು ಎಐ  ವಿಡಿಯೋ ಮಾಡಿದ್ದ ಆರೋಪ ಸಮೀರ್ ಮೇಲಿದೆ. ಈತ ಈಗಾಗಲೇ ಎಸ್ಐಟಿ ವಿಚಾರಣೆಗೂ ಹಾಜರಾಗಿದ್ದಾನೆ.

ಇದೀಗ ಯೂಟ್ಯೂಬ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಸಮೀರ್ ಎಂಡಿ ನನಗೆ ಈಗ ಯಾರೂ ಮನೆ ಬಾಡಿಗೆಗೂ ಕೊಡ್ತಿಲ್ಲ. ಸಮೀರ್ ಎಂಬ ಹೆಸರು ಕೇಳಿದರೆ ಮನೆ ಬಾಡಿಗೆ ಕೊಡಲೂ ಹೆದರುತ್ತಿದ್ದಾರೆ. ನಾನೀಗ ಕಾರಿನಲ್ಲೇ ವಾಸ ಮಾಡಬೇಕಾಗಿ ಬಂದಿದೆ ಎಂದೆಲ್ಲಾ ಹೇಳಿಕೊಂಡಿದ್ದಾನೆ.

ಈತನ ಹೊಸ ವಿಡಿಯೋ ನೋಡಿದ ಜನ ಕಾಮೆಂಟ್ ಮಾಡಿದ್ದು ಹೆದರಬೇಡಿ ಬ್ರದರ್ ನಿಮ್ಮ ಜೊತೆ ನಾವಿದ್ದೇವೆ. ನಮ್ಮದೇ ಎರಡು ಮನೆಯಲ್ಲಿ ಒಂದು ಮನೆಯನ್ನು ನಿಮಗೆ ಬಾಡಿಗೆ ಕೊಡ್ತೇವೆ ಎಂದೆಲ್ಲಾ ಹೇಳಿದ್ದಾರೆ. ಇನ್ನು ಕೆಲವರು ಮತ್ತೆ ಯಾಕೆ ಬೇಕಿತ್ತು ಎಐ  ವಿಡಿಯೋ ಮಾಡುವ ಉಸಾಬರಿ ಎಂದೂ ಕೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ