ಉದ್ಯಾನ ನಗರಿ ಬೆಂಗಳೂರು ಮಂಗಳವಾರ 127 ವರ್ಷಗಳಲ್ಲೇ ದಾಖಲೆಯ ಮಳೆಗೆ ಸಾಕ್ಷಿಯಾಗಿದೆ. ಕೇವಲ 3 ಗಂಟೆಯಲ್ಲಿ 180 ಮಿ.ಮೀ ಮಳೆ ಸುರಿದಿದ್ದು, 1890ರ ನಂತರ ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಪ್ರಮಾಣದ ಮಳೆ ಇದು ಎನ್ನಲಾಗಿದೆ.
ಮಂಗಳವಾರ ಬೆಳಗಿನ ಜಾವ 3ರಿಂದ 6ಗಂಟೆ ಒಳಗಿನ ಸಮಯದಲ್ಲಿ 180 ಮಿ.ಮೀ ಮಳೆಗೆ ಸುರಿದಿದೆ. ನೀರಿನಲ್ಲಿ ಮುಳುಗಿದ ತಗ್ಗು ಪ್ರದೇಶಗಳು, ರಸ್ತೆಗಳು ಜಲಾವೃತ, ಧರೆಗುರುಳಿದ ಮರಗಳು, ಟ್ರಾಫಿಕ್ ಜಾಂ, ಬಸ್ ನಿಲ್ದಾಣದಲ್ಲೇ ನಿಂತ ಬಸ್`ಗಳು ಹೀಗೆ ಈ ಭೀಕರ ಮಳೆಗೆ ಬೆಂಗಳುರಿನ ಜನ ಇನ್ನಿಲ್ಲದಂತೆ ತತ್ತರಿಸಿದ್ದಾರೆ. ಕಿರಿದಾದ ಚರಂಡಿ ವ್ಯವಸ್ಥೆಯಿಂದ ಭಾರೀ ಪ್ರಮಾಣದ ನೀರು ಹೊರ ಹೋಗಲಾರದೇ ರಸ್ತೆ ಮತ್ತು ತಗ್ಗು ಪ್ರದೇಶಗಳ ಮನೆಗಳಿಗೆ ನುಗ್ಗಿದೆ.
ಹಲವೆಡೆ ನೀರಿನಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಬೋಟ್`ಗಳನ್ನ ಸಹ ಬಳಸಲಾಗಿದೆ. ಈ ಮಧ್ಯೆ, ಇನ್ನೂ ಎರಡು ಮೂರು ದಿನ ಇದೇ ರೀತಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ, ಜನ ಮತ್ತಷ್ಟು ಮಳೆಯ ಅವಾಂತರಕ್ಕೆ ಸಿದ್ಧರಾಗಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ