144 ಸೆಕ್ಷನ್ ಜಾರಿ - ರಸ್ತೆ ಮೇಲೆ ಅಡ್ಡಾಡಿದರೆ ಜಿಲ್ಲಾಧಿಕಾರಿ ಏನು ಮಾಡ್ತಾರೆ ಗೊತ್ತಾ?
ಶನಿವಾರ, 21 ಮಾರ್ಚ್ 2020 (15:49 IST)
ಕೊರೋನಾ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತವಾಗಿ ಜಿಲ್ಲೆಯಾದ್ಯಂತ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಆದರೂ ಕಲಬುರಗಿಯಲ್ಲಿ ಕೆಲವು ಯುವಕರು ನಿಷೇಧಾಜ್ಞೆಯ ತೀವ್ರತೆ ಅರಿಯದೆ ರಸ್ತೆ ಮೇಲೆ ಓಡಾಡುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹವರನ್ನು ವಶಕ್ಕೆ ಪಡೆದು ಕೊರೋನಾ ವಿರುದ್ಧದ ಹೋರಾಟದಲ್ಲಿ ಸ್ವಯಂ ಸೇವಕರನ್ನಾಗಿ ಬಳಸಿಕೊಳ್ಳಲಾಗುವುದು ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಕೊರೋನಾ ವೈರಸ್ ಸಾಂಕ್ರಾಮಿಕ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಸಿ.ಆರ್.ಪಿ.ಸಿ. ಕಾಯ್ದೆ 1973 ರ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದು, ಮಾರ್ಚ್ 22ರ ವರೆಗೆ ಇರಲಿದೆ.
ಸಾರ್ವಜನಿಕರು ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಪಡೆಯಲು ಹೊರತುಪಡಿಸಿ ಅನಾವಶ್ಯಕ ವಾಗಿ ಮನೆಯಿಂದ ಹೊರಬರಬಾರದು. ಈ ಮೂಲಕ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಡಿ.ಸಿ. ಶರತ್ ಬಿ. ಮನವಿ ಮಾಡಿದ್ದಾರೆ.