ದೇಶದಲ್ಲಿ 18% ಕರೆಂಟ್ ಕೊರತೆ

ಭಾನುವಾರ, 12 ಮಾರ್ಚ್ 2023 (20:41 IST)
ನ್ಯಾಷನಲ್ ಗ್ರಿಡ್ ಇಂಡಿಯಾ ಅಚ್ಚರಿಯ ವರದಿಯೊಂದನ್ನು ಬಹಿರಂಗ ಪಡಿಸಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಶೇಕಾಡ 18% ರಷ್ಟು ವಿದ್ಯುತ್ ಕೊರತೆ ಎದುರಾಗುವ ಸಂಭವವಿದೆ ಅಂತ ವರದಿ ಹೇಳಿದೆ. ಇದು ಬಹಳ‌ ಆತಂಕಕ್ಕೆ ಕಾರಣವಾಗಿದ್ದು, ರಾಜಧಾನಿ ಬೆಂಗಳೂರಿಗೂ ಇದರ ಎಫೆಕ್ಟ್ ತಟ್ಟದಲಿದ್ಯಾ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಸರ್ಕಾರದ ಆಂತರಿಕ ದಾಖಲೆಗಳನ್ನು ಆಧರಿಸಿ ನ್ಯಾಷನಲ್ ಗ್ರಿಡ್ ಇಂಡಿಯಾ ಮುಂದಿನ ದಿನಗಳಲ್ಲಿ ದೇಶದಲ್ಲಿ 18% ನಷ್ಟು ವಿದ್ಯುತ್ ಅಭಾವ ಸೃಷ್ಟಿಯಾಗಲಿದೆ ಎಂದು ಹೇಳಿದೆ. ಏಪ್ರಿಲ್ ನಲ್ಲಿ ರಾತ್ರಿ ವೇಳೆ ಗರಿಷ್ಠ 217 ಗಿಗಾವಾಟ್ ವಿದ್ಯುತ್ಗೆ ಬೇಡಿಕೆ ನಿರೀಕ್ಷೆ ಇದ್ದು, ಈ ವರ್ಷ ಪೀಕ್ ಅವರ್ನಲ್ಲಿ ಶೇ 18ರಷ್ಟು ವಿದ್ಯುತ್ ಕೊರತೆ ಸಾಧ್ಯತೆ ಇದೆ ಎಂದು ಗ್ರಿಡ್ ವರದಿ ಹೇಳಿದೆ. ಹೀಗೆ ದೇಶದಲ್ಲಿ ಪವರ್ ಶಾರ್ಟೇಜ್ ಬಗ್ಗೆ ಗ್ರಿಡ್ ಇಂಡಿಯಾ ಅನುಮಾನ ವ್ಯಕ್ತಪಡಿಸಿದ್ದು, ಬೆಂಗಳೂರಿಗೂ  ಇದರ ಕರಿ ನೆರಳು ಬೀಳುವ ಸಂಭವ ಇದೆಯಾ ಎಂಬ ಅನುಮಾನ ಶುರುವಾಗಿದೆ. 

 
ಸರ್ಕಾರದ ಆಂತರಿಕ ದಾಖಲೆಗಳನ್ನು ಆಧರಿಸಿ ನ್ಯಾಷನಲ್ ಗ್ರಿಡ್ ಇಂಡಿಯಾ ಮುಂದಿನ ದಿನಗಳಲ್ಲಿ ದೇಶದಲ್ಲಿ 18% ನಷ್ಟು ವಿದ್ಯುತ್ ಅಭಾವ ಸೃಷ್ಟಿಯಾಗಲಿದೆ ಎಂದು ಹೇಳಿದೆ. ಏಪ್ರಿಲ್ ನಲ್ಲಿ ರಾತ್ರಿ ವೇಳೆ ಗರಿಷ್ಠ 217 ಗಿಗಾವಾಟ್ ವಿದ್ಯುತ್ಗೆ ಬೇಡಿಕೆ ನಿರೀಕ್ಷೆ ಇದ್ದು, ಈ ವರ್ಷ ಪೀಕ್ ಅವರ್ನಲ್ಲಿ ಶೇ 18ರಷ್ಟು ವಿದ್ಯುತ್ ಕೊರತೆ ಸಾಧ್ಯತೆ ಇದೆ ಎಂದು ಗ್ರಿಡ್ ವರದಿ ಹೇಳಿದೆ. ಹೀಗೆ ದೇಶದಲ್ಲಿ ಪವರ್ ಶಾರ್ಟೇಜ್ ಬಗ್ಗೆ ಗ್ರಿಡ್ ಇಂಡಿಯಾ ಅನುಮಾನ ವ್ಯಕ್ತಪಡಿಸಿದ್ದು, ಬೆಂಗಳೂರಿಗೂ  ಇದರ ಕರಿ ನೆರಳು ಬೀಳುವ ಸಂಭವ ಇದೆಯಾ ಎಂಬ ಅನುಮಾನ ಶುರುವಾಗಿದೆ. 

ಬೆಂಗಳೂರಿನಲ್ಲಿ ಅವಧಿಗೂ ಮುನ್ನವೇ ವಿಪರೀತ ಸೆಕೆ ಶುರುವಾಗಿದೆ. ಫ್ಯಾನ್, ಎಸಿ, ಕೂಲರ್ ಇಲ್ಲದೇ ಬದುಕಲಾರದ ಸ್ಥಿತಿ ಈಗಲೇ ನಿರ್ಮಾಣ ಆಗಿದೆ. ಹೀಗಾಗಿ ವಿದ್ಯುತ್ ಬಳಕೆಯಲ್ಲಿ ತೀವ್ರ ಹೆಚ್ಚಳ ಕಾಣುವ ಸಾಧ್ಯತೆ ಇದೆ. ಕಳೆದ ನವೆಂಬರ್ ತಿಂಗಳಿನಲ್ಲಿ 5711 ದಿನಕ್ಕೆ ಸರಾಸರಿ ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗ್ತಿತ್ತು. ಆದರೆ  ಫೆಬ್ರವರಿಯಲ್ಲಿ ದಾಖಲೆಯ 7493 ಮೆಗಾ ವ್ಯಾಟ್ ವಿದ್ಯುತ್ ಬಳಕೆಯಾಗಿದೆ. ಹೀಗಾಗಿ ಏಪ್ರಿಲ್, ಮೇ ವೇಳೆಗೆ ಇನ್ನೂ ಹೆಚ್ಚುವರಿ 1000 ಮೆಗಾವ್ಯಾಟ್ಗೆ ಬೇಡಿಕೆ ಬರೋ ಸಾಧ್ಯತೆ ಇದೆ. ಹೀಗಿದ್ರೂ ಬೆಂಗಳೂರಿನಲ್ಲಿ ಲೋಡ್ ಶೆಡ್ಡಿಂಗ್ ಆಗಲ್ಲ ಅಂತ ಬೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ.ದೇಶದ ಬೇರೆ ರಾಜ್ಯಗಳಲ್ಲಿ ಲೋಡ್ ಶೆಡ್ಡಿಂಗ್ ಅದ್ರು ನಮ್ಮ ಬೆಂಗಳೂರಿನಲ್ಲಿ  ಲೋಡ್ ಶೆಡ್ಡಿಂಗ್ ಅಗಲ್ಲ ಅಂತ ಬೆಸ್ಕಾ. ಅಧೀಕಾರಿಗಳು ಮಾತು ನೀಡ್ತಿದರೆ, ನೋಡೋಣ ಇವರ ಮಾತು ಎಷ್ಟು ಸತ್ಯವಾಗುತ್ತೆ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ