ಬಾಗಿಲು ಮುಟ್ಟಿದ್ರೂ ಶಾಕ್, ಕಾರ್ ಡೋರ್ ಮುಟ್ಟಿದ್ರೂ ಶಾಕ್

ಭಾನುವಾರ, 12 ಮಾರ್ಚ್ 2023 (19:39 IST)
ಕರೆಂಟ್ ಶಾಕ್ ಅಂದ್ರೆ ಒಂದು ಸ್ವಿಚ್ ಹಾಕುವಾಗ ಅಥವಾ ವೈಯರ್ ಸರಿಯಾಗಿ ಇಲ್ದೆ ಇದ್ದಾಗ ನಾವು ಮುಟ್ಟಿದಾಗ ಆಗುತ್ತೆ, ಆದ್ರೆ ಇತ್ತೀಚಿನ‌ ದಿನಗಳಲ್ಲಿ ಬರೀ ಮನೆ ಬಾಗಿಲು ಮುಟ್ಟಿದ್ರೂ ಶಾಕ್ ಹೊಡಿತಿದೆ, ಕಾರ್ ಡೋರ್ ಮುಟ್ಟಿದ್ರೂ ಶಾಕ್ ಆಗ್ತಿದೆ.‌ಈ ರೀತಿ ಅನುಭವ ಒಂದಲ್ಲ ಒಂದು ರೀತಿಯಲ್ಲಿ ಎಲ್ರಿಗೂ ಆಗೇ‌ ಇರುತ್ತೆ, ಕೆಲವೊಂದು ಸರಿ ಅಂತೂ ಒಂದೇ ದಿನದಲ್ಲಿ ಬೇರೆ ಬೇರೆ ವಸ್ತುಗಳನ್ನ ಮುಟ್ಟಿದಾಗ ಈ ಶಾಕ್ ಅನುಭವ ಆಗಿದೆ. ಆದ್ರೆ‌ ಇತ್ತೀಚಿನ ದಿನಗಳಲ್ಲಿ ನೋಡಿದ್ರೆ ಹೀಗೆ ಶಾಕ್ ಹೊಡೆಯೋದು ಅನೇಕರಿಗೆ ಹೆಚ್ಚಾಗಿದೆ. ಆದ್ರೆ ಇದಕ್ಕೆ ಕಾರಣ ಏನು ಅಂತ ಮಾತ್ರ ಯಾರಿಗೂ‌ ಗೊತ್ತಿಲ್ಲ. 
 
 ಈ ರೀತಿಯ ಶಾಕಿಂಗ್ ಅನುಭವ ಯಾಕೆ ಆಗ್ತಿದೆ ಅಂತ ಹುಡುಕ್ತ ಹೋದಾಗ ಸಿಕ್ಕಿದ ಮಾಹಿತಿ ಹೀಗೆ .ಈ ರೀತಿ ಸ್ವಲ್ಪ ಪ್ರಮಾಣದ ಕರೆಂಟ್ ಶಾಕ್‌ಗೆ ಸ್ಟಾಟಿಕ್  ಚಾರ್ಜ್ ಅಂತ ಹೇಳಲಾಗುತ್ತೆ, ಬೇಸಿಗೆ ವೇಳೆ ಗಾಳಿಯಲ್ಲಿ ಮಾಯಿಶ್ಚರ್ ಕಡಿಮೆಯಾಗೋ ಕಾರಣದಿಂದ ಜೊತೆಗೆ ಅಣುವಿನ ಎರಡು ಆಬ್ಜೆಕ್ಟ್ ಅಂದ್ರೆ ಪಾಸಿಟಿವ್ ಹಾಗೂ ನೆಗೆಟೀವ್ ಒಂದಾದಾಗ ಈ ರೀತಿ ಆಗುತ್ತೆ ಎಂದು ಹೇಳಲಾಗ್ತಿದೆ. ನೆಗೆಟಿವ್ ಅಂದ್ರೆ ಐರನ್‌ ರೀತಿಯ ವಸ್ತುಗಳನ್ನೆಲ್ಲವನ್ನೂ ಮುಟ್ಟಿದಾಗ ನಮ್ಮ ದೇಹದಲ್ಲಿರೋ ಪಾಸಿಟಿವ್ ಎನರ್ಜಿ ಸೇರಿ ಶಾಕ್ ರೀತಿ ಉಂಟಾಗುತ್ತದೆ ಎಂದು ಹೇಳಲಾಗ್ತಿದೆ.
 
ಇನ್ನು ಬೇಸಿಗೆ ಕಾಲದಲ್ಲಿ ಈ ರೀತಿ ಶಾಕಿಂಗ್ ಹೆಚ್ಚಾಗ್ತಿರೋದ್ರಿಂದ ಬೇಸಿಗೆ ವೇಳೆ ನೈಲಾನ್ ಬಟ್ಟೆ, ಉಲನ್ ಬಟ್ಟೆ ಧರಿಸುವುದನ್ನು ಕಡಿಮೆ ಮಾಡಿ, ಬದಲಿಗೆ ಕಾಟನ್ ಬಟ್ಟೆಗಳನ್ನ ಧರಿಸೋದು ಉತ್ತಮ ಹಾಗೂ ತಂನೀರಿನಿಂದ ಸ್ನಾನ ಮಾಡೋದು ನೀರಿನ ಅಂಶ ಇರುವಂತಹ ಹಣ್ಣು ಸೇವನೆ ಮಾಡೋದು ಒಳ್ಳೇದು ಅಂತ ಹೇಳ್ತಿದ್ದಾರೆ. ಜೊತೆಗೆ ಜನರು ಆತಂಕವನ್ನು ಪಡುವ ಅಗತ್ಯ ಇಲ್ಲ ಅಂತಿದ್ದಾರೆ. ಎಲ್ರಿಗೂ‌ ವಸ್ತುಗಳನ್ನು ಮುಟ್ಟೋದ್ರಿಂದ ಶಾಕ್ ಫಿಲ್ ಆಗ್ತಿದ್ದು, ಜನ್ರು ಟೆನ್ಷನ್ ಬಿಟ್ಟು ತಜ್ಞರು ನೀಡಿರೋ ಸಲಹೆ ಪಡೆಯೋದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ