ದೇಶಾದ್ಯಂತ 2,600 ರೈಲುಗಳ ಸಂಚಾರ ಶುರು

ಭಾನುವಾರ, 24 ಮೇ 2020 (17:41 IST)
ಮುಂದಿನ ಹತ್ತು ದಿನಗಳಲ್ಲಿ ದೇಶಾದ್ಯಂತ 2,600 ರೈಲುಗಳ ಸಂಚಾರ ಶುರುವಾಗಲಿದೆ.

ಎಲ್ಲೆಡೆ ರೈಲುಗಳ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು  ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ.

ಹತ್ತು ದಿನಗಳಲ್ಲಿ ದೇಶದ ವಿವಿಧೆಡೆಯ ಸುಮಾರು  36 ಲಕ್ಷ ಕಾರ್ಮಿಕರನ್ನು ಅವರು ವಾಸಿಸುವ ಊರುಗಳಿಗೆ ರೈಲುಗಳ ಮೂಲಕ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ.  ಈಗಾಗಲೇ ಇದುವರೆಗೆ  ಸುಮಾರು 31 ಲಕ್ಷ ಕಾರ್ಮಿಕರನ್ನು  ಅವರಿರುವ ಸ್ಥಳಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ದೇಶದ ಆಯಾ ರಾಜ್ಯಗಳ ಅನುಮತಿ ಮೇರೆಗೆ, ಸಮ್ಮತಿ ನೀಡುವ ರಾಜ್ಯಗಳ ಒಳಗಡೆಯೂ ರೈಲು ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ. ಈ  ಹಿನ್ನಲೆಯಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಲಾಕ್‍ಡೌನ್ ನಂತರ ಬೆಂಗಳೂರು - ಬೆಳಗಾವಿ ಹಾಗೂ ಬೆಂಗಳೂರು- ಮೈಸೂರು ಮಧ್ಯ ರೈಲು ಸಂಚಾರ ಆರಂಭಿಸಲಾಗಿದೆ.

ಕೊರೊನಾ ಕಾರಣದಿಂದಾಗಿ ಸಧ್ಯ   ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ರೈಲು ಸಂಚಾರ ಸಾರ್ವಜನಿಕರ ಗಮನಕ್ಕೆ ಬಂದಂತೆ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಲಿದೆ ಎಂದು ಸಚಿವ ಸುರೇಶ ಅಂಗಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ