ರೈತ ಯುವಕರನ್ನ ಮದುವೆ ಆಗೋರಿಗೆ 2 ಲಕ್ಷ ಪ್ರೋತ್ಸಾಹ ಧನ

ಶುಕ್ರವಾರ, 28 ಏಪ್ರಿಲ್ 2023 (10:01 IST)
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಜನತಾ ಪ್ರಣಾಳಿಕೆ ಹೆಸರಿನಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಪ್ರತಿ ಎಕರೆ ವಾರ್ಷಿಕ 10 ಸಾವಿರ ರೂ. ಸಹಾಯ ಧನ, ರೈತ ಯುವಕರನ್ನು ಮದುವೆ ಆಗೋರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಸಾರಿಗೆ ನೌಕರರಿಗೆ ನಗದುರಹಿತ ವೈದ್ಯಕೀಯ ಸವಲತ್ತು ನೀಡುವುದು ಹಾಗೂ ವೃತ್ತಿನಿರತ ವಕೀಲರ ರಕ್ಷಣೆಗೆ ಕಾಯ್ದೆ ಜಾರಿಗೊಳಿಸಲಾಗುವುದು.

ನೊಂದಾಯಿತ ವಕೀಲರಿಗೆ ನ್ಯಾಯ ಕವಚ ವಿಮಾ ಯೋಜನೆ ಜಾರಿಗೊಳಿಸುವುದು, ವಕೀಲರ ಮಾಸಿಕ ಭತ್ಯೆ 2 ಸಾವಿರದಿಂದ 3 ಸಾವಿರ ರೂ. ಹೆಚ್ಚಳ ಮಾಡುವುದು. ಮುಸ್ಲಿಮರ 4% ಮೀಸಲಾತಿ ಮರು ಸ್ಥಾಪನೆ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆಗೆ ಬಜೆಟ್ನಲ್ಲಿ ಪ್ರತಿ ವರ್ಷ 5% ಮೀಸಲು ( ಬೌದ್ದ, ಪಾರ್ಸಿ, ಜೈನ, ಮುಸ್ಲಿಂ, ಸಿಖ್) ನೀಡುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ