ರಾಜ್ಯದ ಈ ಜಿಲ್ಲೆಯಲ್ಲಿ 2 ವಾರ ಲಾಕ್‍ಡೌನ್

ಶನಿವಾರ, 8 ಆಗಸ್ಟ್ 2020 (16:20 IST)
ಡೆಡ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಬಳ್ಳಾರಿ ಜಿಲ್ಲೆಯಲ್ಲಿ ಎರಡು ವಾರ ಲಾಕ್ ಡೌನ್ ಮಾಡಬೇಕು ಎಂದು ಶಾಸಕರೊಬ್ಬರು ಆಗ್ರಹ ಮಾಡಿದ್ದಾರೆ.


ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ದಿನೇದಿನೇ ಅತ್ಯಂತ ವೇಗದಲ್ಲಿ ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಜಿಲ್ಲಾಡಳಿತ ಸಂಪೂರ್ಣವಾಗಿ ಎರಡು ವಾರಗಳ ಕಾಲ ಲಾಕ್‍ಡೌನ್ ಮಾಡುವುದಕ್ಕೆ ಮುಂದಾಗಬೇಕು.
ಲಾಕ್‍ಡೌನ್ ಮಾಡುವುದಕ್ಕಿಂತ ಮುಂಚೆಯೇ ಜನರು ಪಡಿತರ ಮತ್ತು ತರಕಾರಿಗಳ ಖರೀದಿಸುವುದಕ್ಕೆ ವ್ಯವಸ್ಥೆ ಮಾಡಬೇಕು. ಒಟ್ಟಿನಲ್ಲಿ ಸಂಪೂರ್ಣ ಲಾಕ್‍ಡೌನ್ ಆದಾಗ ಈ ವೇಗಕ್ಕೆ ಕಡಿವಾಣ ಬಿಳಬಹುದು ಎಂದು ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬಳ್ಳಾರಿ ನಗರಕ್ಕೆ 2 ವೆಂಟಿಲೇಟರ್ ಅಂಬ್ಯುಲೆನ್ಸ್ ನೀಡುವುದಕ್ಕೆ ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಒಪ್ಪಿಕೊಂಡಿದ್ದು, ಎರಡು ವಾರಗಳಲ್ಲಿ ಬಳ್ಳಾರಿಗೆ ಬರಲಿವೆ ಎಂದಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ