ಮಹಾನಗರಪಾಲಿಕೆ ಸುತ್ತಮುತ್ತ 200 ಮೀ. 144 ಸೆಕ್ಷನ್ ಜಾರಿ
ಮಧ್ಯಾಹ್ನ 1ರವರಗೆ ನಾಮಪತ್ರಗಳ ಸ್ವೀಕಾರ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಸಭೆ ನಂತರ ನಾಮಪತ್ರಗಳ ಪರಿಶೀಲನೆ ಆಗುತ್ತದೆ. ಬಳಿಕ ಕ್ರಮಬದ್ಧ ನಾಮನಿರ್ದೇಶನ, ಘೋಷಣೆ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅವಕಾಶವಿದೆ. ಇನ್ನೂ ಮತದಾನದ ಎಣಿಕೆ ನಂತರ ಮೇಯರ್ ಆಯ್ಕೆಯನ್ನ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಫಲಿತಾಂಶ ಘೋಷಣೆ ಮಾಡುವ ಸಾಧ್ಯತೆಯೂ ಇದೆ.
ಬೆಳಗಾವಿ ಮಹಾನಗರ ಪಾಲಿಕೆ ಸುತ್ತ 144 ಸೆಕ್ಷನ್ ಜಾರಿ : ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮಹಾನಗರ ಪೊಲೀಸ್ ಇಲಾಖೆ ಮಹಾನಗರ ಪಾಲಿಕೆ ಮುಂದೆ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಿದೆ.