ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ತುಳುನಾಡಿನ ವೈಭವ ತೆರೆದುಕೊಂಡಿದೆ. ಇದೇ ನಗರದಲ್ಲಿ ಮೊದಲ ಬಾರಿಗೆ ಕಂಬಳ ಪಂದ್ಯ ನಡೆಯುತ್ತಿದೆ. “ಬೆಂಗಳೂರು ಕಂಬಳ ನಮ್ಮ ಕಂಬಳ”ಕ್ಕೆ ಶನಿವಾರ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಮೊದಲ ದಿನ ಕರಾವಳಿ ಕರ್ನಾಟಕದ ಆಹಾರ, ಸಂಸ್ಕೃತಿ ಜನರನ್ನು ಆಕರ್ಷಿಸಿತು. ಶನಿವಾರ ಬೆಳಿಗ್ಗೆಯಿಂದ ಆರಂಭವಾದ ಕಂಬಳ ಪ್ಯಂದಾವಳಿಗಳು ಮಧ್ಯರಾತ್ರಿವರೆಗು ನಡೆದವು.
ಕೊನೆಯ ಮತ್ತು ಎರಡನೇ ದಿನವಾದ ಇಂದು ಬೆಂಗಳೂರು ಕಂಬಳ ಹಲವು ವಿಶೇಷತೆಗಳಿಂದ ಕೂಡಿದೆ. ಕಂಬಳ ಬೆಳ್ಳಗ್ಗೆಯಿಂದ ಆರಂಭವಾಗಿ ಮಧ್ಯರಾತ್ರಿಯವರೆಗೂ ನಡೆಯಲಿದೆ. ರವಿವಾರ ಕಡೆಯ ದಿನವಾದ್ದರಿಂದ ಲಕ್ಷಂತರ ಸಂಖ್ಯೆಯಲ್ಲಿ ಜನರು ಬರಲಿದ್ದು, ಪ್ಯಾಲೇಸ್ ಗ್ರೌಂಡ್ ಸುತ್ತ-ಮುತ್ತ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಬೆಂಗಳೂರು ಕಂಬಳ ವೀಕ್ಷಣೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ, ತೆಲುಗು ನಟಿ ಅನುಷ್ಕಾ ಶೆಟ್ಟಿ ಬರುವ ಸಾಧ್ಯತೆ ಇದೆ.
ಕಂಬಳವನ್ನು ಕಣ್ತುಂಬಿಕೊಳ್ಳಲು ಇವತ್ತು ಕೂಡ ಘಟಾನುಘಟಿ ರಾಜಕೀಯ ನಾಯಕರು ಬರುತ್ತಿದ್ದಾರೆ. ಕಂಬಳದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಬೆಳಿಗ್ಗೆ ಸುಮಾರು 10 ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸೇರಿದಂತೆ ಇನ್ನೂ ಅನೇಕ ಹಿರಿಯ ರಾಜಕಾರಣಿಗಳು, ಅಧಿಕಾರಿಗಳು ಭಾಗಿಯಾಗುವ ಸಾಧ್ಯತೆ ಇದೆ.