‘ಎಲ್ಲರೂ 3 ‘T’ ಸೂತ್ರ ಪಾಲಿಸಿ’

ಗುರುವಾರ, 28 ಏಪ್ರಿಲ್ 2022 (16:38 IST)
ದೇಶಾದ್ಯಂತ ಕೊರೋನಾ ನಾಲ್ಕನೇ ಅಲೆ ದಟ್ಟವಾಗಿ ಅಪ್ಪಳಿಸುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಮಹತ್ವದ ಸಭೆ ನಡೆಸಿದ್ರು..ವಿಡಿಯೋ ಕಾನ್ಫರೆನ್ಸ್ ಮೂಲಕ ಮೀಟಿಂಗ್ ಮಾಡಿದ ಮೋದಿ, ಕೊವಿಡ್ 4ನೇ ಅಲೆ ತಡೆಗೆ ಕೆಲವು ಸೂಚನೆ ಸಲಹೆಗಳನ್ನ ನೀಡಿದ್ರು..60 ವರ್ಷ ಮೇಲ್ಪಟ್ಟರಿಗೆ ತಕ್ಷಣ ಬೂಸ್ಟರ್​ ಡೋಸ್​ ಕೊಡಿ ಮತ್ತು 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಅಭಿಯಾನ ಚುರುಕುಗೊಳಿಸಿ..ಟೆಸ್ಟ್.. ಟ್ರೇಸ್​.. ಟ್ರೀಟ್​ಮೆಂಟ್​ ಎನ್ನುವ 3 ‘T’ ಸೂತ್ರ ಕಡ್ಡಾಯವಾಗಿ ಅಳವಡಿಸಿಕೊಳ್ಳಿ. ಜೊತೆಗೆ ಈ ಸೂತ್ರವನ್ನ ಸಾಧ್ಯವಾದಷ್ಟು ಬೇಗ ಹೆಚ್ಚಳ ಮಾಡಿ..ಪ್ರತಿ ರಾಜ್ಯದಲ್ಲಿ ಬೆಡ್​, ಆಕ್ಸಿಜನ್​, ವೈದ್ಯರ ಕೊರತೆ ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ..ಸೋಂಕು ಹೆಚ್ಚಿರುವ ಕಡೆ ಮುಂಜಾಗ್ರತೆ ವಹಿಸಿ & ದೆಹಲಿ, ಹರಿಯಾಣ, ಮಿಜೋರಾಂ, ರಾಜಸ್ಥಾನ, ಉತ್ತರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಸೋಂಕು ವ್ಯಾಪಿಸದಂತೆ ಕೂಡಲೇ ಕ್ರಮ ತೆಗೆದುಕೊಳ್ಳಿ..ಕೆಲವರು ಕೊರೋನಾ ನಿರ್ಲಕ್ಷ್ಯ ಮಾಡಿ 2ನೇ ಡೋಸ್​ ಪಡೆದುಕೊಂಡಿಲ್ಲ, ಅಂಥವರನ್ನ ಮೊದಲು ಪತ್ತೆ ಹಚ್ಚಿ ಲಸಿಕೆ ಹಾಕಿಸಿ..ಸಾಮಾಜಿಕ ಅಂತರ ಮತ್ತು ಮಾಸ್ಕ್​ ಕಡ್ಡಾಯವಾಗಿ ಧರಿಸುವಂತೆ ನಿಯಮ ಜಾರಿಗೊಳಿಸಿ ಎಂದು ಎಲ್ಲಾ ರಾಜ್ಯಗಳ ಸಿಎಂಗಳಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ