ಕೃಷ್ಣಾ ನದಿಗೆ 3 ಲಕ್ಷ ಕ್ಯೂಸೆಕ್ ನೀರು ; ನೂರಾರು ಹಳ್ಳಿಗಳಿಗೆ ಪ್ರವಾಹ ಭೀತಿ

ಭಾನುವಾರ, 4 ಆಗಸ್ಟ್ 2019 (18:05 IST)
ಮಹಾರಾಷ್ಟ್ರದಲ್ಲಿ ಸುರಿಯುತ್ತಿರೋ ಮಳೆಯಿಂದಾಗಿ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕೃಷ್ಣಾ ನದಿಗೆ 3 ಲಕ್ಷ ಕ್ಯೂಸೆಕ್ಸ ನೀರು ಹರಿದು ಬರಲಿದ್ದು, ನೂರಾರು ಹಳ್ಳಿಗರ ಬದುಕು ಅತಂತ್ರಗೊಳ್ಳಲು ಕಾರಣವಾಗಿದೆ.

ಚಿಕ್ಕೋಡಿಯಲ್ಲಿ ಪ್ರವಾಹ ನಿಯಂತ್ರಣ ಕುರಿತು ಅಧಿಕಾರಿಗಳ ಸಭೆ ನಡೆಯಿತು. ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಹೇಳಿಕೆ ನೀಡಿದ್ದು, ಕೃಷ್ಣಾ ನದಿಗೆ 3 ಲಕ್ಷ ಕ್ಯೂಸೆಕ್ಸ ನೀರು ಹರಿದು ಬರುತ್ತಿದೆ. ಚಿಕ್ಕೋಡಿ ಜಿಲ್ಲಾ ವ್ಯಾಪ್ತಿಯಲ್ಲಿ 41 ಗ್ರಾಮಗಳು ಪ್ರವಾಹ ಪೀಡಿತವಾಗುತ್ತವೆ. ಈಗಾಗಲೇ 10 ಜನ ವಸತಿ ಪ್ರದೇಶಗಳನ್ನ ಸ್ಥಳಾಂತರಿಸಲಾಗಿದೆ ಎಂದ್ರು.

2 ಎನ್ ಡಿ ಆರ್ ಎಫ್ ತಂಡ ಚಿಕ್ಕೋಡಿಗೆ ಆಗಮಿಸಲಿವೆ. ರಕ್ಷಣಾ ಕಾರ್ಯದಲ್ಲಿ  25 ಬೋಟ್ ಗಳನ್ನು ಬಳಸಲಾಗಿದೆ.
ತುರ್ತು ಪರಿಸ್ಥಿತಿ ನಿರ್ವಹಣೆಗೆ 24X7 ಹೆಲ್ಪಲೈನ್ ತೆರೆಯಲಾಗಿದೆ ಎಂದಿದ್ದಾರೆ.

ಭಾರತೀಯ ಸೇನೆ, ರಾಜ್ಯ, ಕೇಂದ್ರ ವಿಪತ್ತು ನಿರ್ವಹಣಾ ತಂಡದಿಂದ ಕಾರ್ಯಾಚರಣೆ ನಡೆಯುತ್ತಿದೆ.
ಮಹಾರಾಷ್ಟ್ರದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಮಳೆ ಆಗಿರುವ ಎಲ್ಲಾ ನೀರು ಸಹ ಕೃಷ್ಣಾ ನದಿಗೆ ಬರು ಸಾಧ್ಯತೆ ಇದೆ ಎಂದ್ರು.

ಇನ್ನು ಕೆಲವು ತಗ್ಗು ತೋಟದ ವಸತಿ ಪ್ರದೇಶದಿಂದ ಹೊರಗೆ ಬಾರದೆ ಜನರು ಸಹಕಾರ ಕೊಡುತ್ತಿಲ್ಲ. ಎಲ್ಲರು ಸುರಕ್ಷಿತ ಸ್ಥಳಗಳಿಗೆ ತೆರಳಲು ಡಿ ಸಿ ಮನವಿ ಮಾಡಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ