ಧರ್ಮಸ್ಥಳ ಬುರುಡೆ ರಹಸ್ಯ: ರತ್ನಗಿರಿ ಬೆಟ್ಟಕ್ಕೆ ತೆರಳಿದ ಎಸ್‌ಐಟಿ ತಂಡಕ್ಕೆ ಬಿಗ್‌ಶಾಕ್

Sampriya

ಶನಿವಾರ, 9 ಆಗಸ್ಟ್ 2025 (16:12 IST)
ಬೆಳ್ತಂಗಡಿ: ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ದೂರುದಾರ ಮಾಸ್ಕ್‌ಮ್ಯಾನ್ ಗುರುತಿಸಿದ ಪಾಯಿಂಟ್‌ನ ಶೋಧ ಕಾರ್ಯಕ್ಕೆ ಇದೀಗ ಬಂಡೆಯೊಂದು ಅಡ್ಡಿ ಬಂದಿದೆ. 

ಜೆಸಿಬಿಯಲ್ಲಿ ಮಣ್ಣು ತೆಗೆಯುತ್ತಿದ್ದ ವೇಳೆ ಬಂಡೆ ಅಡ್ಡಿ ಸಿಕ್ಕಿದ್ದು, ಇದರಿಂದ ಕಾರ್ಯಚರಣೆ ವಿಳಂಬವಾಗಿದೆ ಎಂದು ತಿಳಿದುಬಂದಿದೆ. 

ರತ್ನಗಿರಿ ಬೆಟ್ಟಕ್ಕೆ ಆಗಮಿಸುತ್ತಿದ್ದ ಹಾಗೇ ಒಣಮರ ಇದೆಯಲ್ಲಾ ಅಲ್ಲಿ ಹೂತು ಹಾಕಿದ್ದೆ ಎಂದು ಸಾಕ್ಷಿದೂರು ಎಸ್‌ಐಟಿ ತಂಡಕ್ಕೆ ಹೇಳಿದ್ದಾರೆ. ಎಸ್‌ಐಟಿ ತಂಡದ ಮುಂದೇ ಜೆಸಿಬಿ ಮೂಲಕ ಮಣ್ಣು ಅಗೆಯುವ ಕಾರ್ಯ ಆರಂಭಗೊಂಡಿದೆ. ಆದರೆ ಇದೀಗ ಶೋಧ ಕಾರ್ಯಕ್ಕೆ ಬಂಡೆ ಅಡ್ಡಿಯಾಗಿದ್ದು, ಮುಂದೇ ಯಾವಾ ರೀತಿ ಕಾರ್ಯಚರಣೆ ನಡೆಯುತ್ತದೆ ಎಂದು ಕಾದು ನೋಡಬೇಕಿದೆ. 

ಧರ್ಮಸ್ಥಳದ ಸುತ್ತ ಮುತ್ತಾ ಹಲವು ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ಸಾಕ್ಷಿದೂರುದಾರ ಗುರುತಿಸಿ ಮೊದಲ 13ಪಾಯಿಂಟ್‌ಗಳಲ್ಲಿ 13ನೇ ಸ್ಥಳವನ್ನು ಬಿಟ್ಟು ಬೇರೆಲ್ಲ ಕಡೆ ಕಳೇಬರಹ ಶೋಧ ಕಾರ್ಯ ಅಂತ್ಯಗೊಂಡಿದೆ. ಅದಲ್ಲದೆ ಸಾಕ್ಷಿದಾರ ಗುರುತಿಸಿದ 14 ಹಾಗೂ 15ನೇ ಪಾಯಿಂಟ್‌ನಲ್ಲೂ ಕಳೇಬರಹ ಶೋಧ ಅಂತ್ಯಗೊಂಡಿದೆ. ಆದರೆ 6ನೇ ಪಾಯಿಂಟ್ ಬಿಟ್ಟರೆ, 11ನೇ ಎ ಪಾಯಿಂಟ್‌ನಲ್ಲಿ ಮೂಳೆಗಳು ಸಿಕ್ಕಿವೆ. 

ಇದೀಗ ದೂರುದಾರ ಬಾಹುಬಲಿ ಬೆಟ್ಟದ ಬಳಿ ಶವಗಳನ್ನು ಹೂತಿರುವುದಾಗಿ ಹೇಳಿದ್ದಾನೆ. ಅದರಂತೆ ರತ್ನಗಿರಿ ಬೆಟ್ಟದಲ್ಲಿ ಶೋಧ ಕಾರ್ಯಚರಣೆ ಆರಂಭಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ