ಕೊಯ್ನಾ ಡ್ಯಾಂ ನಿಂದ ನೀರು: 50 ಗ್ರಾಮಗಳಿಗೆ ಪ್ರವಾಹ ಭೀತಿ

ಶನಿವಾರ, 3 ಆಗಸ್ಟ್ 2019 (15:56 IST)
ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆಗೆ ಸಿದ್ಧತೆ ನಡೆದಿದ್ದು, ಇಂದಿನಿಂದ ಹೆಚ್ಚುವರಿ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಸಾಧ್ಯತೆ ಕಂಡು ಬಂದಿದೆ. ಇದರಿಂದ ರಾಜ್ಯದ 50 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರವಾಹ ಭೀತಿ ತಲೆದೋರಿದೆ.

ಮಹಾರಾಷ್ಟ್ರ ನೀರಾವರಿ  ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದ್ದು, ಕರ್ನಾಟಕದ ಅಧಿಕಾರಿಗಳಿಗೆ ಮಾಹಿತಿ ನೀಡಿರುವ ಮಹಾ ಅಧಿಕಾರಿಗಳು ಹೆಚ್ಚುವರಿ ನೀರು ಬಿಡೋದಾಗಿ ಹೇಳಿದ್ದಾರೆ.

105 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ ಕೋಯ್ನ್ ಡ್ಯಾಂ ಈಗಾಗಲೇ ಶೇಕಡಾ 80 ರಷ್ಟು ಭರ್ತಿಯಾಗಿದೆ.
ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗದ ಹಿನ್ನೆಲೆಯಲ್ಲಿ ಕೃಷ್ಣಾ ನದಿ ಒಳ ಹರಿವು ಹೆಚ್ಚಳಗೊಳ್ಳಲಿದೆ.  
2 ಲಕ್ಷ 20 ಸಾವಿರ ಕ್ಯೂಸೆಕ್ ನೀರು ಕೃಷ್ಣೆಯ ಒಳ ಹರಿವು ಇದೆ.

ಕೊಯ್ನಾ ಜಲಾಶಯದಿಂದ ನೀರು ಬಿಟ್ಟರೆ ಪ್ರವಾಹ ಹಿನ್ನೆಲೆ ಚಿಕ್ಕೋಡಿ ಉಪ ವಿಭಾಗದ ನದಿ ತೀರದ 37 ಗ್ರಾಮಗಳ ಜನರು ಆತಂಕಕ್ಕೆ ಒಳಗಾಗಲಿದ್ದಾರೆ. ಬೆಳಗಾವಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ