ಬೆಂಗಳೂರು: ನಗರದಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಕೈಗೊಳ್ಳಲು ಜಪಾನ್ ಇಂಟರ್ ನ್ಯಾಷನಲ್ ಕಾರ್ಪೋರೇಷನ್ ಏಜೆನ್ಸಿ (ಜೈಕಾ) ಜಲಮಂಡಳಿಗೆ 32,391 ಕೋಟಿ ಸಾಲ ಮಂಜೂರು ಮಾಡಿದೆ ಎಂದು ಬಿ. ಡಬ್ಲ್ಯೂ. ಎಸ್.ಎಸ್.ಬಿ ಪತ್ರಿಕಾ ಪ್ರಕಣೆಯಲ್ಲಿ ಮಾಹಿತಿ ನೀಡಿದೆ.
ಇದಕ್ಕೆ ಸಂಬಂಧಿಸಿದಂತೆ ಸಂಸ್ಥೆಯು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಜಲ ಮಂಡಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ನಗರದ ಮೂರನೇ ಹಂತದ ಕುಡಿಯುವ ನೀರು ಯೋಜನೆಗೆ ಈ ಸಾಲ ನೀಡಲಾಗುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೂ ನೀರು ಪೂರೈಕೆಗೆ ಹಣ ವಿನಿಯೋಗಿಸಲು ಉದ್ದೇಶಿಸಲಾಗಿದೆ ನೀರು ಸರಬರಾಜು ಮಂಡಳಿ ಹೇಳಿದೆ.
ಈ ಯೋಜನೆ ಅಡಿ ಪಾಲಿಕೆ ವ್ಯಾಪ್ತಿಯಲ್ಲಿ ಸುರಕ್ಷಿತ ಮತ್ತು ಸುಸ್ಥಿರವಾದ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆ ಮತ್ತು ನೀರು ಶುದ್ದೀಕರಣ ಘಟಕಗಳನ್ನು ನಿರ್ಮಾಣ ಮಾಡಲಾಗುತ್ತದೆ. ಈ ಯೋಜನೆಯಡಿಯಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವ 110 ಗ್ರಾಮಗಳೂ ಸೇರಿದ್ದು, ಇದರಿಂದ ಸುಮಾರು 35 ಲಕ್ಷ ಜನರಿಗೆಅನುಕೂಲವಾಗಲಿದೆ ಎಂದು ತಿಳಿಸಿದೆ.