ನಾವೂ ಘೋಷಿಸಿದಂತೆ ನಡೆದುಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದ ಸಿಎಂ

ಬುಧವಾರ, 18 ಜನವರಿ 2023 (14:04 IST)
ನಾಳೆ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ವಿಚಾರವಾಗಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು,ನಾಳೆ ಅವರ ಎರಡು ಕಾರ್ಯಕ್ರಮ ಇದೆ.ಎನ್ ಎಲ್ ಪಿ ಸಿ ಯೋಜನೆಗೆ ಬರ್ತಿದ್ದಾರೆ.ಏಷ್ಯಾದಲ್ಲಿ ಪ್ರಮುಖವಾಗಿರೋದು ಇದು ಒಂದು .ಕೇಂದ್ರ ಹಾಗೂ ರಾಜ್ಯ ಸರ್ಕಾರ ದುಡ್ಡು ಕೊಟ್ಟಿದೆ.ನಮ್ಮ ಇರಿಗೇಶನ್ ಗೆ ಅದು ಮೈಲಿಗಲ್ಲು.ನಮಗೆ ಇದು ಇನ್ಸ್ಪೇರೇಶನ್.ಇದರಿಂದ ಇನ್ನು ಹೆಚ್ಚೆಚ್ಚು ಮಾಡಲು ಪ್ರೇರಣೆ ಸಿಗುತ್ತೆ.ಇದರ  ಜೊತೆಗೆ ಮತ್ತೊಂದು ಕಾರ್ಯಕ್ರಮವಿದೆ.ಸುಮಾರು ನಾಲ್ಕೈದು ದಶಕಗಳ ಕಾಲ ಒಂದು ಬೇಡಿಕೆ ಇತ್ತು.ಬಂಜಾರ ಅಂದ್ರೆ ಲಮಾಣಿ ಜನಾಂಗದ ತಾಂಡಗಳನ್ನ ಊರು ಅಂತಾ ಮಾಡಿ ಹಕ್ಕು ಪತ್ರ ಕೊಡಲು ಬರ್ತಿದ್ದಾರೆ.ಸಾಮಾಜಿಕವಾಗಿ ದೊಡ್ಡ ಪರಿವರ್ತನೆಯ ಕಾರ್ಯಕ್ರಮ ಇದೆ.ಇನ್ಮುಂದೆ ಅಲೆಮಾರಿಗಳಾಗಿ ಇರದೇ ಅವರ ಬದುಕಿಗೆ ಒಂದು ಯೋಜನೆ ರೂಪಿಸಿದೇವೆ.ರಾಜ್ಯಕ್ಕೆ ಖಂಡಿತಾ ಒಳ್ಳೇದಾಗುತ್ತದೆ ಎಂದು ಸಿಎಂ ಹೇಳಿದ್ರು.
 
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದು,ಅದರ ಬಗ್ಗೆ ತಿಳಿಸುತ್ತೇನೆ ಎಂದಿದ್ದಾರೆ.ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಹಿನ್ನಲೆ ಹೆಚ್ಚು ಸಮಯವಕಾಶ ಇರಲಿಲ್ಲ.ಅದಕ್ಕೂ ಮುಂಚೆಯೇ ಮಾತನಾಡಿದ್ದೇನೆ.ಆದಷ್ಟು ಬೇಗ ತಿಳಿಸುತ್ತೇನೆ ಎಂದಿದ್ದಾರೆ.ಬಿ ಕೆ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಅಷ್ಟು ಕೀಳುಮಟ್ಟದ ಹೇಳಿಕೆಗಳಿಗೆ  ನಾನು ಏನೋ ಹೇಳೊಕೆ ಹೋಗಲ್ಲ.ಇದೇ ನನ್ನ ಉತ್ತರ ಅಂತಾ ಬಿ.ಕೆ ಹರಿಪ್ರಸಾದ್ ವಿರುದ್ಧ ಬೊಮ್ಮಾಯಿ ಕಿಡಿಕಾರಿದ್ದಾರೆ.
 
ನಾ ನಾಯಕಿ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ೨ ಸಾವಿರ ಘೋಷಣೆ ವಿಚಾರವಾಗಿ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.ಅವರು ಹತಾಷಾರಾಗಿದ್ದಾರೆ.ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ.ಅವರು ಅಧಿಕಾರದಲ್ಲಿದ್ದಾಗ ಯಾಕೆ ಮಾಡಲಿಲ್ಲ.ಅವತ್ತು ಕೊಟ್ಟಿದ್ದ ಭರವಸೆಗಳನ್ನ ಅವರು ಮಾಡಲಿಲ್ಲ.ಈಗ ಮಾಡ್ತಾರಾ..!? ಇನ್ನು ಘೋಷಣೆ ಮಾಡ್ತಾರೆ.ಆದ್ರೆ ನಾವೂ ನುಡಿದಂತೆ ನಡೆದುಕೊಂಡಿದ್ದೇವೆ.ನಾನು ಘೋಷಣೆ ಮಾಡಿದ್ದೇ ಅದನ್ನೇ ಅವರು ಈಗ ಹೇಳಿದ್ದಾರೆ.ಆದ್ರೆ ನಾವೂ ಘೋಷಿಸಿದಂತೆ ನಡೆದುಕೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ