‘ಬಂಗಾರದ ಮನುಷ್ಯ’ ಚಿತ್ರಕ್ಕೆ 50 ವರ್ಷ
ಡಾ. ರಾಜ್ ರ ಬಂಗಾರದ ಮನುಷ್ಯ ಚಿತ್ರ ತೆರೆಕಂಡು ಇಂದಿಗೆ 50 ವರ್ಷ ಪೂರೈಸಿದೆ. ಅರ್ಧ ಶತಮಾನ ಕಳೆದರೂ ಕೂಡ ಈ ಚಿತ್ರದ ಚಾರ್ಮ್ ಕಡಿಮೆ ಆಗಿಲ್ಲ. ಇಂದಿಗೂ ಕೂಡ ಸಿನಿಪ್ರಿಯರ ಸಂವಾದದಲ್ಲಿ ಬಂಗಾರದ ಮನುಷ್ಯ ಚಿತ್ರ ಪ್ರಸ್ತುತವಾಗಿ ಉಳಿದುಕೊಂಡಿದೆ. ಬಂಗಾರದ ಮನುಷ್ಯ ಸಿನಿಮಾವನ್ನು ನಿರ್ದೇಶನ ಮಾಡಿದವರು ಎಸ್. ಸಿದ್ದಲಿಂಗಯ್ಯ. ಟಿ.ಕೆ. ರಾಮರಾವ್ ಬರೆದ ಬಂಗಾರದ ಮನುಷ್ಯ ಕಾದಂಬರಿ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿತ್ತು. ರಾಜ್ಕುಮಾರ್, ಭಾರತಿ, ಬಾಲಕೃಷ್ಣ, ಶ್ರೀನಾಥ್, ಲೋಕನಾಥ್, ದ್ವಾರಕೀಶ್, ವಜ್ರಮುನಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಹತ್ತು ಹಲವು ಕಾರಣಗಳಿಂದಾಗಿ ಬಂಗಾರದ ಮನುಷ್ಯ ಚಿತ್ರ ಇಂದಿಗೂ ವಿಶೇಷ ಸ್ಥಾನ ಉಳಿಸಿಕೊಂಡಿದೆ.