ಶಿಕ್ಷಕರ ನೇಮಕಾತಿ ಬಹಳ ದಿನಗಳಿಂದ ಉಳಿದುಕೊಂಡಿದೆ. ಹೀಗಾಗಿ ಇಂದಿನ ಶೈಕ್ಷಣಿಕ ವರ್ಷದಲ್ಲಿ ಶೀಘ್ರದಲ್ಲೇ 5000 ಶಿಕ್ಷಕರ ನೇಮಕಾತಿಗೆ ತೀರ್ಮಾನ ಮಾಡಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಯಿ ಹೇಳಿದ್ದಾರೆ.
ಶಿಕ್ಷಕರ ದಿನಾಚರಣೆ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ರಾಜ್ಯ ಪುರಸ್ಕೃತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವರ್ಷದೊಳಗೆ 5000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.
ಹೊಸ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ ಅದು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ನೀತಿ ಸ್ವತಂತ್ರ ಭಾರತದಲ್ಲಿ ಮೊದಲ ಬಾರಿ ಜಾರಿಗೆ ಬಂದಿದೆ. ಹೊಸ ಶಿಕ್ಷಣ ನೀತಿ ಕ್ರಾಂತಿಕಾರಿ ಹೆಜ್ಜೆ, ಶಿಕ್ಷಕರೂ ಸರ್ಕಾರ ಸಂಸ್ಥೆಗಳೂ ಕೂಡ ಇದಕ್ಕೆ ಸಿದ್ದರಾಗಬೇಕು ಹೊಸ ನೀತಿ ಬಂದಾಗ ಪರ ವಿರೋಧ ಇರೋದು ಸಹಜ ಎಂದು ಅವರು ಕರೆ ನೀಡಿದರು.
ಇವತ್ತಿನ ಸವಾಲುಗಳನ್ನು ಎದುರಿಸಲು ಮಕ್ಕಳನ್ನು
ತಯಾರು ಮಾಡಬೇಕು ದೇಶವನ್ನು ಬೆಳೆಸುವ ಶಕ್ತಿ ನಮ್ಮ ಗುರುಗಳಲ್ಲಿದೆ,ದೇಶದ ಭವಿಷ್ಯ ಬರೆಯುವ ಎಲ್ಲ ಶಕ್ತಿ ಶಿಕ್ಷಕರಲ್ಲಿದೆ, ನಮ್ಮ ಮಕ್ಕಳಲ್ಲಿ ಬದಲಾವಣೆ ಬಂದು ಮಕ್ಕಳಿಗೆ ಯಶಸ್ಸು ಸಿಕ್ಕಿದರೆ ಅದು ನಮ್ಮದೇ ಯಶಸ್ಸು ಎಂದು ಶಿಕ್ಷಕರಿಗೆ ಸಿಎಂ ಕಿವಿ ಮಾತು ಹೇಳಿದರು.